Home Bibles ☰ Books ದ್ವಿತೀಯೋಪದೇಶಕಾಂಡ 28:16 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 28:16 · ಕನ್ನಡ ಬೈಬಲ್

ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ;

Cross references

ಆದಿಕಾಂಡ 3:17

ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.

ಆದಿಕಾಂಡ 4:11

ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ.

ಆದಿಕಾಂಡ 5:29

ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.

ಆದಿಕಾಂಡ 8:21

ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

ದ್ವಿತೀಯೋಪದೇಶಕಾಂಡ 28:3

ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ,

ದ್ವಿತೀಯೋಪದೇಶಕಾಂಡ 28:55

ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ.

1 ಅರಸುಗಳು 17:1

ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.

1 ಅರಸುಗಳು 17:5

ಅವನು ಹೋಗಿ ಕರ್ತನ ಮಾತಿನ ಹಾಗೆಯೇ ಮಾಡಿದನು; ಅಂದರೆ ಅವನು ಹೋಗಿ ಯೊರ್ದನಿಗೆ ಎದುರಾಗಿರುವ ಕೆರೀತ್‌ ಹಳ್ಳದ ಬಳಿಯಲ್ಲಿ ವಾಸ ವಾಗಿದ್ದನು.

1 ಅರಸುಗಳು 17:12

ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು.

ಯೋಬ 24:18

ನೀರುಗಳ ಹಾಗೆ ಅವನು ತೀವ್ರವಾಗಿದ್ದಾನೆ; ಅವನ ಭಾಗವು ಭೂಮಿಯ ಮೇಲೆ ಶಪಿಸಲ್ಪಟ್ಟಿದೆ; ಅವನು ದ್ರಾಕ್ಷೇ ತೋಟಗಳ ಮಾರ್ಗಕ್ಕೆ ತಿರುಗು ವದಿಲ್ಲ.

ಸಾಮೇತಿಗಳು 3:33

ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ.

ಯೆಶಾಯ 24:6

ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.

ಯೆಶಾಯ 43:28

ಆದಕಾರಣ ಪರಿಶುದ್ಧ ಸ್ಥಾನದ ಪ್ರಧಾನರನ್ನು ಅಪವಿತ್ರಮಾಡಿ, ಯಾಕೋ ಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.

ಯೆರೆಮಿಯ 9:11

ನೀವು ಅವರಿಗೆ ಹೀಗೆ ಹೇಳಬೇಕು--ಆಕಾಶ ಗಳನ್ನೂ ಭೂಮಿಯನ್ನೂ ಸೃಷ್ಟಿಸದ ದೇವರುಗಳು ಭೂಮಿಯ ಮೇಲಿನಿಂದಲೂ ಈ ಆಕಾಶಗಳ ಕೆಳಗಿ ನಿಂದಲೂ ನಾಶವಾಗುವವು.

ಯೆರೆಮಿಯ 14:2

ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು.

ಯೆರೆಮಿಯ 14:18

ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.

Interlinear

Choose Theme