Home Bibles ದ್ವಿತೀಯೋಪದೇಶಕಾಂಡ 27:2 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 27:2 · ಕನ್ನಡ ಬೈಬಲ್

ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ

Cross references

ದ್ವಿತೀಯೋಪದೇಶಕಾಂಡ 6:1

ನೀವು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಮಾಡತಕ್ಕವುಗಳು;

ದ್ವಿತೀಯೋಪದೇಶಕಾಂಡ 9:1

ಓ ಇಸ್ರಾಯೇಲೇ, ಕೇಳು; ನೀನು ಹೋಗಿ ನಿನಗಿಂತ ದೊಡ್ಡದಾದ ಬಲಿಷ್ಠ ಜನಾಂಗ ಗಳನ್ನೂ ಆಕಾಶದ ವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ

ದ್ವಿತೀಯೋಪದೇಶಕಾಂಡ 11:31

ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವದಕ್ಕೆ ನೀವು ಯೊರ್ದನನ್ನು ದಾಟಿಹೋಗಬೇಕು; ಆಗ ಅದನ್ನು ನೀವು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡು ವಿರಿ.ನಾನು ಈಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ನಿಯಮ ನ್ಯಾಯಗಳನ್ನು ಕಾಪಾಡಿ ನಡೆದು ಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 26:1

ಇದಲ್ಲದೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ

ದ್ವಿತೀಯೋಪದೇಶಕಾಂಡ 27:3

ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.

ಯೆಹೋಶುವ 1:11

ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.

ಯೆಹೋಶುವ 4:1

ಜನರೆಲ್ಲರು ಯೊರ್ದನನ್ನು ದಾಟಿ ಮುಗಿಸಿದಾಗ ಕರ್ತನು ಯೆಹೋಶುವ ನೊಂದಿಗೆ ಮಾತನಾಡಿ--

ಯೆಹೋಶುವ 4:5

ಯೆಹೋಶುವನು ಅವರಿಗೆ--ನೀವು ಯೊರ್ದನಿನ ಮಧ್ಯದಲ್ಲಿ ನಿಮ್ಮ ದೇವರಾದ ಕರ್ತನ ಮಂಜೂಷದ ಮುಂದೆ ಇಸ್ರಾಯೇಲ್‌ ಮಕ್ಕಳ ಗೋತ್ರ ಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರಿ.

ಯೆಹೋಶುವ 8:31

ಆಗ ಅವರು ಅದರ ಮೇಲೆ ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.

ಯೆಹೋಶುವ 8:32

ಅಲ್ಲಿ ಅವನು ಮೋಶೆ ಇಸ್ರಾಯೇಲ್‌ ಮಕ್ಕಳ ಮುಂದೆ ಬರೆದಿದ್ದ ನ್ಯಾಯಪ್ರಮಾಣದ ಪ್ರತಿಯನ್ನು ಕಲ್ಲುಗಳಲ್ಲಿ ಬರೆದನು.

ಯೋಬ 19:24

ಕಬ್ಬಿಣದ ಕಂಠದಿಂದ ಸೀಸದ ಸಂಗಡ ನಿತ್ಯವಾಗಿ ಬಂಡೆಯಲ್ಲಿ ಅವುಗಳು ಕೆತ್ತಲ್ಪಟ್ಟಿದ್ದರೆ, ಎಷ್ಟೋ ಒಳ್ಳೇದು!

ಯೆಹೆಜ್ಕೇಲ 11:19

ಅವರಿಗೆ ಒಂದು ಹೃದಯವನ್ನು ಕೊಡು ವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು; ಅವರೊಳಗಿಂದ ಕಠಿಣ ಹೃದಯವನ್ನು ಹೊರಗೆ ತೆಗೆದು ಮೃದು ಹೃದಯವನ್ನು ಕೊಡುವೆನು.

ಯೆಹೆಜ್ಕೇಲ 36:26

ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.

Interlinear

Choose Theme