ದ್ವಿತೀಯೋಪದೇಶಕಾಂಡ 21:7 · ಕನ್ನಡ ಬೈಬಲ್
ಉತ್ತರಕೊಟ್ಟು ಹೇಳತಕ್ಕದ್ದೇನಂದರೆ--ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ; ನಮ್ಮ ಕಣ್ಣುಗಳು ಅದನ್ನು ನೋಡಲಿಲ್ಲ.
Cross references
ಅಂಕೆಗಳ ಪುಸ್ತಕ 5:19
ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು.
2 ಸಮುವೇಲ 16:8
ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು.
ಯೋಬ 21:21
ಅವನ ಬಳಿಕ ಅವನ ತಿಂಗಳಲೆಕ್ಕ ಮಧ್ಯದಲ್ಲಿ ಹರಿದ ಮೇಲೆ ಅವನ ಮನೆಯಲ್ಲಿ ಅವನಿಗೆ ಏನು ಸಂತೋಷ?
ಯೋಬ 21:31
ಅವನ ಮಾರ್ಗವನ್ನು ಮುಖಾ ಮುಖಿಯಾಗಿ ಅವನಿಗೆ ತೋರಿಸಿ ಅವನು ಮಾಡಿದ್ದ ಕ್ಕೋಸ್ಕರ ಅವನಿಗೆ ಮುಯ್ಯಿಗೆಮುಯ್ಯಿ ಕೊಡುವವನು ಯಾರು?
ಕೀರ್ತನೆಗಳು 7:3
ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ,