ಅರ್ನೋನಿನ ತೀರದಲ್ಲಿರುವ ಅರೋ ಯೇರ್ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.
Cross references
ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ನದಿಯ ಸವಿಾಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು ಅರ್ಧ ಗಿಲ್ಯಾದ್ ಬೆಟ್ಟವನ್ನೂ ಅದರ ಪಟ್ಟಣಗಳನ್ನೂ ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಕೊಟ್ಟೆನು.
ಅರ್ನೋನ್ ನದಿಯ ತೀರದಲ್ಲಿರುವ ಅರೋ ಯೇರ್ ಮೊದಲುಗೊಂಡು ಹೆರ್ಮೋನೆಂಬ ಸೀಯೋನ್ ಪರ್ವತದ ವರೆಗೆಯೊರ್ದನಿನ ಈಚೆಯಲ್ಲಿರುವ ಮೂಡಣ ದಿಕ್ಕಿನಲ್ಲಿ ಇರುವ ಎಲ್ಲಾ ಬೈಲುಗಳನ್ನು ಸಹ ಪಿಸ್ಗಾದ ಊಟೆಗಳಲ್ಲಿರುವ ಬೈಲಿನ ಸಮುದ್ರದ ವರೆಗೆ ಸ್ವಾಧೀನಮಾಡಿಕೊಂಡರು.
ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
ಅರ್ನೋನ್ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್ ನದಿಯ ವರೆಗೆ
ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ
ಅರ್ನೋನ್ ನದಿಯ ತೀರದ ಲ್ಲಿರುವ ಅರೋಯೇರ್ ನದಿಯ ಮಧ್ಯದಲ್ಲಿರುವ ಪಟ್ಟಣವು ಮೊದಲುಗೊಂಡು
ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
ಇಸ್ರಾಯೇಲು ಹೆಷ್ಬೋನಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರೋಯೇರಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರ್ನೋನಿನ ತೀರವಾದ ಎಲ್ಲಾ ಪಟ್ಟಣ ಗಳಲ್ಲಿಯೂ ಮುನ್ನೂರು ವರುಷಗಳಿಂದ ವಾಸಿಸಿರು ವಾಗ ಇಷ್ಟರ ವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?
ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
ಆರೋಯೇರಿನ ಪಟ್ಟಣಗಳು ತಳ್ಳಿಹಾಕ ಲ್ಪಟ್ಟಿವೆ; ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ಮಲಗುವ ಮಂದೆಗಳಿಗೆ ಸ್ಥಳವಾಗುವದು.
ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ.
ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಬ್ಬುವಿಕೆಯಿಂದ ಬಲವಾದ ನಿವಾಸಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಅವನನ್ನು ಕ್ಷಣಮಾತ್ರದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು. ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ನನಗೆ ಕಾಲವನ್ನು ನೇಮಿಸು ವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು?
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?