Home Bibles ದ್ವಿತೀಯೋಪದೇಶಕಾಂಡ 2:25 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 2:25 · ಕನ್ನಡ ಬೈಬಲ್

ಇದೇ ದಿವಸ ಆಕಾಶವೆಲ್ಲಾದರ ಕೆಳಗಿರುವ ಜನಾಂಗಗಳ ಮೇಲೆ ನಿನ್ನ ಹೆದರಿಕೆಯನ್ನೂ ನಿನ್ನ ಭಯವನ್ನೂ ಉಂಟು ಮಾಡಲಾರಂಭಿಸುತ್ತೇನೆ. ಅವರು ನಿನ್ನ ಸುದ್ದಿಯನ್ನು ಕೇಳಿ ನಿನಗೋಸ್ಕರ ನಡುಗಿ ಅಂಜುವರು.

Cross references

ನಿರ್ಗಮಕಾಂಡ 15:14

ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.

ನಿರ್ಗಮಕಾಂಡ 23:27

ನನ್ನ ಭಯವನ್ನು ನಿಮ್ಮ ಮುಂದೆ ಕಳುಹಿಸಿ ನೀವು ಸೇರುವ ಜನರನ್ನೆಲ್ಲಾ ನಾಶಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿ ಸುವಂತೆ ಮಾಡುವೆನು.

ಅಂಕೆಗಳ ಪುಸ್ತಕ 22:3

ಆ ಜನರು ಬಹುಮಂದಿಯಾದದರಿಂದ ಮೋವಾಬಿನವರು ಅವರಿಗೆ ಬಹಳವಾಗಿ ಅಂಜಿದರು; ಮೋವಾಬಿ ನವರು ಇಸ್ರಾಯೇಲ್‌ ಮಕ್ಕಳನ್ನು ಕಂಡು ದಿಗಿಲು ಪಟ್ಟರು.

ದ್ವಿತೀಯೋಪದೇಶಕಾಂಡ 11:25

ಯಾವನೂ ನಿಮ್ಮ ಮುಂದೆ ನಿಲ್ಲಶಕ್ತ ನಲ್ಲ; ನಿಮ್ಮ ದೇವರಾದ ಕರ್ತನು ನಿಮಗೆ ಹೇಳಿದ ಹಾಗೆ ನಿಮ್ಮ ಹೆದರಿಕೆಯನ್ನೂ ದಿಗಿಲನ್ನೂ ನೀವು ಸಂಚಾರ ಮಾಡುವ ಸಮಸ್ತ ದೇಶದ ಮೇಲೆ ಇಡುವನು.

ದ್ವಿತೀಯೋಪದೇಶಕಾಂಡ 28:10

ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು;

ಯೆಹೋಶುವ 2:9

ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.

ಯೆಹೋಶುವ 9:24

ಅದಕ್ಕವರು ಯೆಹೋಶುವ ನಿಗೆ--ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.

ಯೆಹೋಶುವ 10:2

ಯೆರೂಸಲೇಮಿನ ಅರಸನಾದ ಅದೋನೀ ಚೆದೆಕನು ಕೇಳಿ ಬಹು ಭಯಪಟ್ಟರು. ಯಾಕಂದರೆ ಗಿಬ್ಯೋನ್‌ ರಾಜಪಟ್ಟಣಗಳ ಹಾಗೆ ದೊಡ್ಡ ಪಟ್ಟಣ ವಾಗಿತ್ತು; ಮತ್ತು ಆಯಿಗಿಂತಲೂ ದೊಡ್ಡದಾಗಿತ್ತು; ಇದಲ್ಲದೆ ಅದರ ಮನುಷ್ಯರು ಪರಾಕ್ರಮಶಾಲಿಗಳಾ ಗಿದ್ದರು.

2 ಅರಸುಗಳು 7:6

ಕರ್ತನು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ ಶಬ್ದವೂ ಕುದುರೆಗಳ ಶಬ್ದವೂ ಮಹಾಸೈನ್ಯದ ಶಬ್ದವೂ ಕೇಳಲ್ಪಡುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊ ಬ್ಬರು--ಇಗೋ, ಇಸ್ರಾಯೇಲಿನ ಅರಸನು ನಮ್ಮ ಮೇಲೆ ಬೀಳಲು ಹಿತ್ತಿಯರ ಅರಸುಗಳನ್ನೂ ಐಗುಪ್ತದ ಅರಸುಗಳನ್ನೂ ಕೂಲಿಗೆ ಕರೆದಿದ್ದಾನೆ ಅಂದುಕೊಂಡರು.

ಕೀರ್ತನೆಗಳು 105:38

ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆ ಯುಳ್ಳವರಾದ್ದರಿಂದ ಅವರು ಹೊರಟು ಹೋದದಕ್ಕೆ ಸಂತೋಷಿಸಿದರು.

ಯೆರೆಮಿಯ 33:9

ಒಬ್ಬೊಬ್ಬನು ತನ್ನ ತನ್ನ ದಾಸ ದಾಸಿಯನ್ನು ಅವನು ಇಬ್ರೀಯನಾಗಲಿ ಇಬ್ರೀಯಳಾಗಲಿ ಇದ್ದರೆ ಸ್ವತಂತ್ರರಾಗಿ ಕಳುಹಿಸ ಬೇಕೆಂದು ಒಬ್ಬನಾದರೂ ಅವರಿಂದ ಅಂದರೆ ತನ್ನ ಸಹೋದರನಾದ ಯೆಹೂದ್ಯನಿಂದ ಸೇವೆ ತಕ್ಕೊಳ್ಳ ಬೇಡವೆಂದು ಅವರಿಗೆ ಬಿಡುಗಡೆಯನ್ನು ಸಾರಿದ ಮೇಲೆ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು.

ಪ್ರಕಟನೆ 3:9

ಇಗೋ, ಯೆಹೂದ್ಯ ರಲ್ಲದವರಾಗಿದ್ದರೂ ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದವರನ್ನು ಬರಮಾಡಿ, ಇಗೋ, ಅವರನ್ನು ನಿನ್ನ ಪಾದಗಳ ಮುಂದೆ ಆರಾಧಿಸುವಂತೆ ಮಾಡುವೆನು, ಇದರಿಂದ ನಾನು ನಿನ್ನನ್ನು ಪ್ರೀತಿಸಿದ್ದೇನೆಂದು ಅವರು ತಿಳುಕೊಳ್ಳುವಂತೆ ಮಾಡು

Interlinear

Choose Theme