Home Bibles ದ್ವಿತೀಯೋಪದೇಶಕಾಂಡ 19:4 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 19:4 · ಕನ್ನಡ ಬೈಬಲ್

ಬದುಕುವ ಹಾಗೆ ಅಲ್ಲಿಗೆ ಓಡಿಹೋಗತಕ್ಕ ಕೊಲೆ ಪಾತಕನ ವಿವರವೇನಂದರೆ -- ತಿಳಿಯದೆ ಇಲ್ಲವೆ ಪೂರ್ವಕಾಲದಲ್ಲಿ ಹಗೆಮಾಡದೆ ತನ್ನ ನೆರೆಯವನನ್ನು ಹೊಡೆದವನೇ.

Cross references

ಆದಿಕಾಂಡ 31:2

ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ ಅದು ತನ್ನ ಕಡೆಗೆ ಮೊದಲು ಇದ್ದಹಾಗೆ ಇರಲಿಲ್ಲ.

ಅಂಕೆಗಳ ಪುಸ್ತಕ 35:15

ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್‌ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.

ದ್ವಿತೀಯೋಪದೇಶಕಾಂಡ 4:42

ತಿಳಿಯದೆ, ಮುಂಚೆ ಹಗೆ ಮಾಡಿರದೆ, ತನ್ನ ನೆರೆಯವನನ್ನು ಕೊಂದುಹಾಕಿದ ಕೊಲೆಪಾತಕನು ಓಡಿಹೋಗುವ ಹಾಗೆ ಅವುಗಳನ್ನು ಬೇರೆ ಮಾಡಿದನು. ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕುವನು.

ದ್ವಿತೀಯೋಪದೇಶಕಾಂಡ 19:6

ರಕ್ತ ವಿಚಾರಕನು ತನ್ನ ಹೃದಯದಲ್ಲಿ ಕೋಪ ಉರಿಯುತ್ತಿರುವಾಗ ಕೊಲೆಪಾತಕನನ್ನು ಹಿಂದಟ್ಟಿ, ಮಾರ್ಗ ದೂರವಾಗಿರುವ ಕಾರಣ ಅವನನ್ನು ಹಿಡಿದು ಪೂರ್ವಕಾಲದಲ್ಲಿ ಹಗೆಮಾಡದೆ ಇದ್ದದರಿಂದ ಮರ ಣಕ್ಕೆ ಪಾತ್ರನಾಗದ ಇವನನ್ನು ಕೊಂದುಹಾಕದ ಹಾಗೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಬೇಕು.

ಯೆಹೋಶುವ 3:4

ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ದೂರ ಇರಬೇಕು. ನೀವು ಹೋಗುವ ಮಾರ್ಗವನ್ನು ತಿಳಿಯುವ ಹಾಗೆ ಅದರ ಹತ್ತಿರ ಬರಬೇಡಿರಿ. ನೀವು ಎಂದಾದರೂ ಆ ಮಾರ್ಗದಲ್ಲಿ ದಾಟಿ ಹೋಗಿರು ವದಿಲ್ಲ ಅಂದರು.

1 ದಿನವೃತ್ತಾಂತ 11:2

ಇದಲ್ಲದೆ ಪೂರ್ವದಲ್ಲಿ ಸೌಲನು ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವ ನಾಗಿಯೂ ಇದ್ದಿ; ಕರ್ತನಾದ ನಿನ್ನ ದೇವರು ನಿನಗೆ ಹೇಳಿದ್ದು--ನೀನು ನನ್ನ ಜನರಾದ ಇಸ್ರಾಯೇಲ್ಯರನ್ನು ಮೇಯಿಸುವವನಾಗಿಯೂ; ಇಸ್ರಾಯೇಲ್ಯರ ಮೇಲೆ ಅಧಿಕಾರಿಯಾಗಿರುವಿ ಎಂಬದು.

ಯೆಶಾಯ 30:33

ಪೂರ್ವದಿಂದ (ಪುರಾತನದಿಂದ) ತೋಫೆತ್‌ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು.

Interlinear

Choose Theme