ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಆ ಸಾಯತಕ್ಕವನು ಸಾಯಬೇಕು; ಒಬ್ಬನ ಸಾಕ್ಷಿಯ ಮಾತಿನಿಂದ ಅವನು ಸಾಯಬಾರದು.
Cross references
ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.
ಒಬ್ಬನ ಅಕ್ರಮದ ನಿಮಿತ್ತವೂ ಅವನು ಮಾಡುವ ಎಲ್ಲಾ ಪಾಪದ ನಿಮಿತ್ತವೂ ಅವನಿಗೆ ವಿರೋಧವಾಗಿ ಒಬ್ಬನು ಸಾಕ್ಷಿಯಾಗಿ ನಿಂತುಕೊಳ್ಳಬಾರದು; ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಕಾರ್ಯವೆಲ್ಲಾ ಸ್ಥಿರವಾಗುವದು.
ಆದರೆ ಅವನು ನಿನ್ನ ಮಾತನ್ನು ಕೇಳದೆಹೋದರೆ ನಿನ್ನೊಂದಿಗೆ ಒಬ್ಬನನ್ನು ಅಥವಾ ಇಬ್ಬರನ್ನು ಕರಕೊಂಡು ಹೋಗು; ಹೀಗೆ ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಸ್ಥಾಪಿಸಲ್ಪಡುವದು.
ಇಬ್ಬರ ಸಾಕ್ಷಿಯು ನಿಜವೆಂದು ನಿಮ್ಮ ನ್ಯಾಯ ಪ್ರಮಾಣದಲ್ಲಿಯೂ ಬರೆದದೆ.
ನಾನು ನಿಮ್ಮ ಬಳಿಗೆ ಬರುವದು ಇದು ಮೂರನೆಯ ಸಾರಿ. ಇಬ್ಬರು ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು.
(ಸಭೆಯ) ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ತೆಗೆದು ಕೊಳ್ಳಬೇಡ.
ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು.