Home Bibles ದ್ವಿತೀಯೋಪದೇಶಕಾಂಡ 16:2 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 16:2 · ಕನ್ನಡ ಬೈಬಲ್

ಹೀಗಿರುವ ದರಿಂದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನಿಗೆ ಕುರಿಪಶುಗಳ ಪಸ್ಕವನ್ನು ಅರ್ಪಿಸಬೇಕು.

Cross references

ನಿರ್ಗಮಕಾಂಡ 12:5

ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು.

ಅಂಕೆಗಳ ಪುಸ್ತಕ 28:16

ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು.

ಅಂಕೆಗಳ ಪುಸ್ತಕ 28:19

ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು.

ದ್ವಿತೀಯೋಪದೇಶಕಾಂಡ 12:5

ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.

ದ್ವಿತೀಯೋಪದೇಶಕಾಂಡ 12:11

ನೀವು ಸುರಕ್ಷಿತವಾಗಿ ವಾಸಿಸುವಾಗ ನಿಮ್ಮ ದೇವರಾದ ಕರ್ತನು ತನ್ನ ಹೆಸರಿನ ನಿವಾಸಕ್ಕೆ ಆದುಕೊಳ್ಳುವ ಸ್ಥಳವಿರುವದು; ಅಲ್ಲಿಗೆ ನಾನು ನಿಮಗೆ ಆಜ್ಞಾಪಿಸುವದನ್ನೆಲ್ಲಾ ಅಂದರೆ ನಿಮ್ಮ ದಹನ ಬಲಿಗಳನ್ನೂ ಬಲಿಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಕೈ ಎತ್ತುವ ಅರ್ಪಣೆಗಳನ್ನೂ ನೀವು ಕರ್ತನಿಗೆ ಮಾಡುವ ಎಲ್ಲಾ ಶ್ರೇಷ್ಠ ಪ್ರಮಾಣಗಳನ್ನೂ ತರಬೇಕು.

ದ್ವಿತೀಯೋಪದೇಶಕಾಂಡ 12:14

ಕರ್ತನು ನಿನ್ನ ಗೋತ್ರಗಳಲ್ಲಿ ಒಂದನ್ನು ಆದು ಕೊಳ್ಳುವ ಸ್ಥಳದಲ್ಲೇ ನಿನ್ನ ದಹನಬಲಿಗಳನ್ನು ಅರ್ಪಿಸಬೇಕು; ಅಲ್ಲೇ ನಾನು ನಿನಗೆ ಆಜ್ಞಾಪಿಸು ವದನ್ನೆಲ್ಲಾ ಮಾಡಬೇಕು.

ದ್ವಿತೀಯೋಪದೇಶಕಾಂಡ 12:18

ಅವುಗಳನ್ನು ನಿನ್ನ ದೇವರಾದ ಕರ್ತನ ಮುಂದೆ ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳ ಲ್ಲಿರುವ ಲೇವಿಯನೂ ತಿನ್ನಬೇಕು; ಆಗ ನಿನ್ನ ಎಲ್ಲಾ ಕೈ ಕೆಲಸದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ನೀನು ಸಂತೋಷಪಡಬೇಕು.

ದ್ವಿತೀಯೋಪದೇಶಕಾಂಡ 12:26

ನಿನಗಿರುವ ಪರಿಶುದ್ಧವಾದವುಗಳನ್ನೂ ನಿನ್ನ ಪ್ರಮಾಣಗಳನ್ನೂ ಮಾತ್ರ ಕರ್ತನು ಆದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಬರಬೇಕು.

ದ್ವಿತೀಯೋಪದೇಶಕಾಂಡ 15:20

ನಿನ್ನ ಚೊಚ್ಚಲಾದ ಕುರಿಯ ಉಣ್ಣೆ ಕತ್ತರಿಸಬಾರದು. ನಿನ್ನ ದೇವರಾದ ಕರ್ತನ ಮುಂದೆ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ನೀನು ನಿನ್ನ ಮನೆಯವರು ಸಹಿತವಾಗಿ ಅವುಗಳನ್ನು ವರುಷ ವರುಷವೂ ತಿನ್ನಬೇಕು.

2 ದಿನವೃತ್ತಾಂತ 35:7

ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ

ಮತ್ತಾಯ 26:2

ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.

ಮತ್ತಾಯ 26:17

ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪಸ್ಕದ ಊಟಮಾಡುವದಕ್ಕೆ ನಾವು ನಿನಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ನೀನು ಕೋರುತ್ತೀ ಎಂದು ಆತನನ್ನು ಕೇಳಿದರು.

ಮಾರ್ಕ 14:12

ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ ಪಸ್ಕದ ಕುರಿಯನ್ನು ಅವರು ಕೊಯ್ದಾಗ ಆತನ ಶಿಷ್ಯರು ಆತನಿಗೆ--ನೀನು ಪಸ್ಕದ ಊಟಮಾಡು ವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಕೇಳಿದರು.

ಲೂಕ 22:8

ಆತನು ಪೇತ್ರ ಯೋಹಾನರನ್ನು ಕಳುಹಿಸಿ--ನಾವು ಊಟ ಮಾಡುವಂತೆ ಹೋಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ ಅಂದನು.

ಲೂಕ 22:15

ಆಗ ಆತನು ಅವರಿಗೆ--ನಾನು ಶ್ರಮೆಯನ್ನು ಅನುಭವಿಸು ವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕ ಊಟಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿ ದ್ದೇನೆ

1 ಕೊರಿಂಥದವರಿಗೆ 5:7

ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ.

Interlinear

Choose Theme