Home Bibles ದ್ವಿತೀಯೋಪದೇಶಕಾಂಡ 14:27 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 14:27 · ಕನ್ನಡ ಬೈಬಲ್

ನಿನ್ನ ಬಾಗಲುಗಳಲ್ಲಿರುವ ಲೇವಿಯನನ್ನು ಕೈಬಿಡಬಾರದು. ಯಾಕಂದರೆ ಅವನಿಗೆ ನಿನ್ನ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.

Cross references

ಅಂಕೆಗಳ ಪುಸ್ತಕ 18:20

ಕರ್ತನು ಆರೋನನಿಗೆ--ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು; ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು; ನಾನೇ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ನಿನ್ನ ಪಾಲೂ ಸ್ವಾಸ್ತ್ಯವೂ ಆಗಿದ್ದೇನೆ.

ದ್ವಿತೀಯೋಪದೇಶಕಾಂಡ 10:9

ಆದದ ರಿಂದ ಲೇವಿಯರಿಗೆ ಅವನ ಸಹೋದರರ ಸಂಗಡ ಪಾಲೂ ಸ್ವಾಸ್ತ್ಯವೂ ಉಂಟಾಗಲಿಲ್ಲ; ಅವನ ದೇವ ರಾದ ಕರ್ತನು ಅವನಿಗೆ ವಾಗ್ದಾನಮಾಡಿದಂತೆ ಕರ್ತನೇ ಅವನ ಸ್ವಾಸ್ತ್ಯವು.

ದ್ವಿತೀಯೋಪದೇಶಕಾಂಡ 12:12

ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ಸಂತೋಷವಾಗಿರಬೇಕು; ನೀವೂ ನಿಮ್ಮ ಕುಮಾರ ಕುಮಾರ್ತೆಯರೂ ನಿಮ್ಮ ದಾಸದಾಸಿಯರೂ; ನಿಮ್ಮ ಬಾಗಲುಗಳಲ್ಲಿರುವ ಲೇವಿಯನು ಸಹ. ಅವನಿಗೆ ನಿಮ್ಮ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.

ದ್ವಿತೀಯೋಪದೇಶಕಾಂಡ 12:18

ಅವುಗಳನ್ನು ನಿನ್ನ ದೇವರಾದ ಕರ್ತನ ಮುಂದೆ ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳ ಲ್ಲಿರುವ ಲೇವಿಯನೂ ತಿನ್ನಬೇಕು; ಆಗ ನಿನ್ನ ಎಲ್ಲಾ ಕೈ ಕೆಲಸದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ನೀನು ಸಂತೋಷಪಡಬೇಕು.

ದ್ವಿತೀಯೋಪದೇಶಕಾಂಡ 12:19

ನೀನು ಭೂಮಿಯ ಮೇಲೆ ಜೀವಿಸುವ ವರೆಗೆ ಲೇವಿಯನನ್ನು ಬಿಟ್ಟುಬಿಡದ ಹಾಗೆ ನೋಡಿಕೋ.

ದ್ವಿತೀಯೋಪದೇಶಕಾಂಡ 14:29

ಆಗ (ನಿನ್ನ ಸಂಗಡ ಪಾಲನ್ನೂ ಸ್ವಾಸ್ತ್ಯವನ್ನೂ ಹೊಂದದ) ಲೇವಿಯನೂ ನಿನ್ನ ಬಾಗಲು ಗಳಲ್ಲಿರುವ ಅನ್ಯದೇಶದವನೂ ದಿಕ್ಕಿಲ್ಲದವನೂ ವಿಧ ವೆಯೂ ಬಂದು ನಿನ್ನ ದೇವರಾದ ಕರ್ತನು ನಿನ್ನನ್ನು ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಆಶೀರ್ವದಿಸುವ ಹಾಗೆ ತಿಂದು ತೃಪ್ತರಾಗಲಿ.

ದ್ವಿತೀಯೋಪದೇಶಕಾಂಡ 18:1

ಯಾಜಕರಾದ ಲೇವಿಯರಿಗೂ ಆ ಎಲ್ಲಾ ಲೇವಿಯ ಗೋತ್ರಕ್ಕೂ ಇಸ್ರಾಯೇಲಿನ ಸಂಗಡ ಪಾಲೂ ಸ್ವಾಸ್ತ್ಯವೂ ಇರಬಾರದು; ಅವರು ಕರ್ತನ ಬೆಂಕಿಯಿಂದ ಮಾಡಿದ ಬಲಿಗಳನ್ನೂ ಆತನ ಸ್ವಾಸ್ತ್ಯವನ್ನೂ ತಿನ್ನಬೇಕು.

ಗಲಾತ್ಯದವರಿಗೆ 6:6

ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶ ಮಾಡುವವನಿಗೆ ತನಿಗರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.

1 ತಿಮೋಥೆಯ 5:17

ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.

Interlinear

Choose Theme