ನೀನು ಅವುಗಳನ್ನು ತೆಗೆದುಕೊಂಡು ಹೋಗದ ಹಾಗೆ ನಿನಗೆ ದಾರಿ ದೂರವಾದರೆ ಇಲ್ಲವೆ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಮೇಲೆ
Cross references
ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
ನೀವು ಹೆಜ್ಜೆಯಿಡುವ ಸ್ಥಳ ವೆಲ್ಲಾ ನಿಮ್ಮದಾಗುವದು; ಅರಣ್ಯದಿಂದ ಲೆಬನೋನಿನ ವರೆಗೂ ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದ ವರೆಗೂ ನಿಮ್ಮ ಮೇರೆಯಾಗಿ ರುವದು.
ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.
ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ಕರ್ತನು ನಿನಗೆ ಕೊಟ್ಟ ಪಶು ಕುರಿಗಳನ್ನು ನಾನು ನಿನಗೆ ಆಜ್ಞಾಪಿಸಿದಂತೆ ಕೊಯ್ದು ನಿನ್ನ ಬಾಗಲುಗಳಲ್ಲಿ ನಿನಗೆ ಮನಸ್ಸಿದ್ದಷ್ಟು ಉಣ್ಣಬಹುದು.