ಆದರೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಆಶೀರ್ವಾದದ ಪ್ರಕಾರ ನಿನಗೆ ಮನಸ್ಸಿದ್ದಷ್ಟು ಮಾಂಸವನ್ನು ನಿನ್ನ ಎಲ್ಲಾ ಬಾಗಲುಗಳಲ್ಲಿ ಕೊಯ್ದು ತಿನ್ನಬಹುದು; ಜಿಂಕೆ ಕಡವೆ ಗಳ ಹಾಗೆಯೇ ಶುದ್ಧನೂ ಅಶುದ್ಧನೂ ಅದನ್ನು ತಿನ್ನ ಬಹುದು.
Cross references
ಇಸ್ರಾಯೇಲಿನ ಮನೆತನದಲ್ಲಿ ಯಾವನಾದರೂ ಒಂದು ಎತ್ತನ್ನಾಗಲಿ ಕುರಿಮರಿಯ ನ್ನಾಗಲಿ ಆಡನ್ನಾಗಲಿ ಪಾಳೆಯದೊಳಗಾಗಲಿ ಹೊರ ಗಾಗಲಿ ವಧಿಸಿ
ನಿನ್ನ ದೇವರಾದ ಕರ್ತನು ನಿನಗೆ ವಾಗ್ದಾನ ಮಾಡಿದ ಹಾಗೆ ನಿನ್ನ ಮೇರೆಯನ್ನು ವಿಸ್ತಾರಮಾಡು ವಾಗ ನೀನು--ನನ್ನ ಪ್ರಾಣವು ಮಾಂಸವನ್ನು ತಿನ್ನ ಬೇಕೆಂದು ನಾನು ಆಶೆಪಡುವದರಿಂದ ನಾನು ಮಾಂಸ ವನ್ನು ತಿನ್ನುವೆನು ಎಂದು ಹೇಳಿ ನಿನಗೆ ಮನಸ್ಸಿದ್ದಷ್ಟು ಮಾಂಸವನ್ನು ತಿನ್ನಬಹುದು;
ಆದರೆ ಜಿಂಕೆ ಕಡವೆಗಳನ್ನು ಉಣ್ಣುವ ಹಾಗೆ ಅದನ್ನು ಉಣ್ಣಬೇಕು. ಶುದ್ಧನೂ ಅಶುದ್ಧನೂ ಕೂಡ ಅದೇ ರೀತಿಯಲ್ಲಿ ಅದನ್ನು ತಿನ್ನಲಿ.
ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ ಕೊಂಡಗುರಿ.
ಆಗ ಆ ಹಣವನ್ನು ನಿನಗೆ ಮನಸ್ಸು ಬಂದದ್ದಕ್ಕೆಲ್ಲಾ ಅಂದರೆ ಹಸು, ಕುರಿ, ದ್ರಾಕ್ಷಾರಸ, ಮಧ್ಯಪಾನಗಳಿ ಗೋಸ್ಕರವೂ ನಿನ್ನ ಪ್ರಾಣವು ಆಶಿಸುವ ಎಲ್ಲವುಗಳಿ ಗೋಸ್ಕರವೂ ವೆಚ್ಚಮಾಡಬೇಕು; ಆ ಮೇಲೆ ನೀನೂ ನಿನ್ನ ಮನೆಯವರೂ ಅಲ್ಲಿ ನಿನ್ನ ದೇವರಾದ ಕರ್ತನ ಮುಂದೆ ತಿಂದು ಸಂತೋಷಪಡಬೇಕು.
ಅದನ್ನು ನಿನ್ನ ದೇವರಾದ ಕರ್ತನಿಗೆ ಅರ್ಪಿಸಬಾರದು. ಕಡವೆ ಜಿಂಕೆಗಳನ್ನು ತಿನ್ನುವ ಹಾಗೆ ಶುದ್ಧರೂ ಅಶುದ್ಧರೂ ಅದನ್ನು ನಿನ್ನ ಬಾಗಲು ಗಳಲ್ಲಿ ತಿನ್ನಬೇಕು.ಅದರ ರಕ್ತವನ್ನು ಮಾತ್ರ ತಿನ್ನದೆ ನೀರಿನಂತೆ ಭೂಮಿಯಲ್ಲಿ ಹೊಯ್ಯಬೇಕು.
ಅದರ ರಕ್ತವನ್ನು ಮಾತ್ರ ತಿನ್ನದೆ ನೀರಿನಂತೆ ಭೂಮಿಯಲ್ಲಿ ಹೊಯ್ಯಬೇಕು.