Home Bibles ದ್ವಿತೀಯೋಪದೇಶಕಾಂಡ 11:3 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 11:3 · ಕನ್ನಡ ಬೈಬಲ್

ಆತನು ಐಗುಪ್ತದ ಮಧ್ಯದಲ್ಲಿ ಐಗುಪ್ತದ ಅರಸನಾದ ಫರೋಹನಿಗೆ ಮತ್ತು ಅವನ ಎಲ್ಲಾ ದೇಶಕ್ಕೆ ಮಾಡಿದ ಆತನ ಸೂಚಕಕಾರ್ಯಗಳನ್ನೂ ಕೃತ್ಯಗ ಳನ್ನೂ

Cross references

ದ್ವಿತೀಯೋಪದೇಶಕಾಂಡ 1:30

ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.

ದ್ವಿತೀಯೋಪದೇಶಕಾಂಡ 4:34

ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?

ದ್ವಿತೀಯೋಪದೇಶಕಾಂಡ 7:19

ನಿನ್ನ ಕಣ್ಣುಗಳು ನೋಡಿದ ದೊಡ್ಡ ಉಪದ್ರವ ಗಳನ್ನೂ ನಿನ್ನ ದೇವರಾದ ಕರ್ತನು ನಿನ್ನನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ ಅದ್ಭುತ ಗಳನ್ನೂ ಬಲವಾದ ಕೈಯನ್ನೂ ಚಾಚಿದ ತೋಳನ್ನೂ ನೀನು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀನು ಯಾವ ಜನಗಳಿಗೆ ಭಯಪಡುತ್ತೀಯೋ ಆ ಜನಗಳಿ ಗೆಲ್ಲಾ ನಿನ್ನ ಕರ್ತನಾದ ದೇವರು ಹಾಗೆಯೇ ಮಾಡು ವನು.

ಕೀರ್ತನೆಗಳು 78:12

ಅವರ ತಂದೆಗಳ ಮುಂದೆ ಐಗುಪ್ತ ದೇಶ ದಲ್ಲಿ, ಸೋನ್‌ ಬೈಲಿನಲ್ಲಿ ಆತನು ಅದ್ಭುತಗಳನ್ನು ಮಾಡಿದನು.

ಕೀರ್ತನೆಗಳು 105:27

ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.

ಕೀರ್ತನೆಗಳು 135:9

ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.

ಯೆರೆಮಿಯ 32:20

ಹಗಲು ರಾತ್ರಿ ತಮ್ಮ ಕಾಲದಲ್ಲಿ ಆಗದ ಹಾಗೆ ಹಗಲಿನ ಸಂಗಡ ನನ್ನ ಒಡಂಬಡಿಕೆಯನ್ನೂ ರಾತ್ರಿಯ ಸಂಗಡ ನನ್ನ ಒಡಂಬಡಿಕೆಯನ್ನೂ ವಿಾರುವದಕ್ಕೆ ನಿಮ್ಮಿಂದಾದರೆ

ಯೆರೆಮಿಯ 32:21

ಆಗ ನಾನು ನನ್ನ ಸೇವಕನಾದ ದಾವೀದನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಅವನ ಸಿಂಹಾಸನದಲ್ಲಿ ಆಳುವ ಮಗನು ಅವನಿಗಿಲ್ಲದ ಹಾಗೆ ಮತ್ತು ನನ್ನ ಸೇವಕರಾಗಿರುವ ಯಾಜಕರಾದ ಲೇವಿಯರ ಸಂಗಡ ಮಾಡಿದ ಒಡಂಬಡಿಕೆಯನ್ನೂ ವಿಾರುವದಕ್ಕೆ ಆದೀತು.

Interlinear

Choose Theme