ನಮ್ಮ ದೇವರಾದ ಕರ್ತನು ಹೋರೇಬಿನಲ್ಲಿ ನಮಗೆ--ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು;
Cross references
ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.
ಅಲ್ಲಿ ಇಗೋ, ನಾನು ಹೋರೇಬಿನಲ್ಲಿ ಬಂಡೆಯ ಮೇಲೆ ನಿನ್ನ ಮುಂದೆ ನಿಂತುಕೊಳ್ಳುವೆನು ನೀನು ಬಂಡೆಯನ್ನು ಹೊಡೆಯ ಬೇಕು. ಆಗ ಜನರು ಕುಡಿಯುವಂತೆ ನೀರು ಹೊರಗೆ ಬರುವದು ಅಂದನು. ಮೋಶೆಯು ಇಸ್ರಾಯೇಲ್ಯರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.
ಇಸ್ರಾಯೇಲ್ ಮಕ್ಕಳು ಐಗುಪ್ತವನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಅರಣ್ಯಕ್ಕೆ ಬಂದರು.
ಇಲ್ಲವೆ ಆ ಮೇಘವು ಎರಡು ದಿವಸಗಳಾದರೂ ಒಂದು ತಿಂಗಳಾದರೂ ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾ ಯೇಲ್ ಮಕ್ಕಳು ಪ್ರಯಾಣಮಾಡದೆ ಇಳುಕೊಂಡಿ ದ್ದರು. ಅದು ಮೇಲಕ್ಕೆತ್ತಲ್ಪಟ್ಟಾಗಲೇ ಅವರು ಪ್ರಯಾಣ ಮಾಡುತ್ತಿದ್ದರು.ಕರ್ತನ ಆಜ್ಞೆಯ ಪ್ರಕಾರ ಅವರು ಇಳುಕೊಳ್ಳುತ್ತಾ ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಕರ್ತನು ಆಜ್ಞಾಪಿಸಿ ದಂತೆ ಕರ್ತನ ಅಪ್ಪಣೆಯನ್ನು ಕಾಪಾಡುತ್ತಿದ್ದರು.
ಎರಡನೆಯ ವರುಷದ ಎರಡನೇ ತಿಂಗಳಿನ ಇಪ್ಪತ್ತನೇ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎತ್ತಲ್ಪಟ್ಟಿತು.
ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.
ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು.
ನೀನು ಹೋರೇಬಿನಲ್ಲಿ ಸಭೆಯ ದಿವಸ ದಲ್ಲಿ ನಿನ್ನ ದೇವರಾದ ಕರ್ತನಿಂದ ಬೇಡಿಕೊಂಡ ಎಲ್ಲಾದರ ಪ್ರಕಾರ ಆಗುವದು; ನಾನು ಸಾಯದ ಹಾಗೆ ಇನ್ನು ಮೇಲೆ ನನ್ನ ದೇವರಾದ ಕರ್ತನ ಶಬ್ದವನ್ನು ನಾನು ಕೇಳುವದಿಲ್ಲ; ಈ ಘೋರವಾದ ಬೆಂಕಿಯನ್ನೂ ನೋಡುವದಿಲ್ಲವೆಂದು ಹೇಳಿದೆಯಲ್ಲಾ.