ಆಗ ಅರಸನ ಮತ್ತು ಅವನ ಪ್ರಭುಗಳ ಮಾತುಗಳಿಗಾಗಿ ರಾಣಿಯು ಔತಣದ ಮನೆಗೆ ಬಂದು ಮಾತನಾಡಿ ಹೇಳಿದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು. ನಿನ್ನ ಆಲೋ ಚನೆಗಳು ನಿನ್ನನ್ನು ಕಳವಳಪಡಿಸದಿರಲಿ; ನಿನ್ನ ಮುಖವು ಕಳೆಗುಂದದಿರಲಿ;
Cross references
ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
ಅವಳು ಸಾಯುವ ವೇಳೆಯಲ್ಲಿ ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು--ಭಯಪಡಬೇಡ; ಯಾಕಂದರೆ ಮಗನನ್ನು ಹೆತ್ತಿದ್ದೀ ಎಂದು ಅವಳಿಗೆ ಹೇಳಿದರು.
ಆಗ ಬತ್ಷೆಬೆಳು ಮುಖವನ್ನು ನೆಲಕ್ಕೆ ಬೊಗ್ಗಿಸಿ ಅರಸನನ್ನು ವಂದಿಸಿ--ನನ್ನ ಒಡೆ ಯನೂ ಅರಸನೂ ಆದ ದಾವೀದನು ಎಂದೆಂದಿಗೂ ಬಾಳಲಿ ಅಂದಳು.
ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
ವ್ಯರ್ಥತ್ವದಿಂದ ನೀವು ನನ್ನನ್ನು ಸಂತೈಸುವದು ಹೇಗೆ? ನಿಮ್ಮ ಉತ್ತರಗಳಲ್ಲಿ ಸುಳ್ಳು ಉಳುಕೊಳ್ಳುವದು.
ಆಗ ಕಸ್ದೀಯರು ಅರಸನಿಗೆ ಅರಮಾಯ ಭಾಷೆಯಲ್ಲಿ ಹೇಳಿ ದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು, ಕನಸನ್ನು ನಿನ್ನ ಸೇವಕರಿಗೆ ಹೇಳು; ಆಗ ನಾವು ಅದರ ಅರ್ಥಗಳನ್ನು ತಿಳಿಸುವೆವು ಅಂದರು.
ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
ಆಗ ಪ್ರಧಾನರೂ ದೇಶಾಧಿಪತಿಯೂ ಅರಸನ ಬಳಿ ಕೂಡಿಬಂದು ಹೀಗೆಂದರು--ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.
ಆಗ ದಾನಿಯೇಲನು ಅರಸನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.