Home Bibles ದಾನಿಯೇಲ 4:6 · ಕನ್ನಡ ಬೈಬಲ್
ದಾನಿಯೇಲ 4:6 · ಕನ್ನಡ ಬೈಬಲ್

ಆದದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವದಕ್ಕೋಸ್ಕರ ಬಾಬೆಲಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.

Cross references

ಆದಿಕಾಂಡ 41:7

ಆ ಬಡಕಲಾದ ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ನುಂಗಿಬಿಟ್ಟವು. ಫರೋಹನು ಎಚ್ಚೆತ್ತಾಗ ಇಗೋ, ಅದು ಒಂದು ಕನಸಾಗಿತ್ತು.

ಯೆಶಾಯ 8:19

ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ?

ಯೆಶಾಯ 47:12

ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು.

ದಾನಿಯೇಲ 1:17

ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು.

ದಾನಿಯೇಲ 2:2

ಆಗ ಅರಸನಿಗೆ ತನ್ನ ಕನಸುಗಳನ್ನು ತಿಳಿಸುವ ಹಾಗೆ ಅರಸನು ಮಂತ್ರಗಾರರನ್ನೂ ಜೋತಿಷ್ಯರನ್ನೂ ಮಾಟ ಗಾರರನ್ನೂ ಕಸ್ದೀಯರನ್ನೂ ಕರೆಯಲು ಆಜ್ಞಾಪಿಸಿ ದನು; ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು.

ದಾನಿಯೇಲ 2:48

ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್‌ ಮೇಷಕ್‌ ಮತ್ತು ಅಬೇದ್‌ನೆಗೋ ಎಂಬವರಿಗೆ ಬಾಬೆಲ್‌ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.

ದಾನಿಯೇಲ 4:15

ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ.

ದಾನಿಯೇಲ 5:11

ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.

Interlinear

Choose Theme