ಆ ಮೇಲೆ ಬಾಬೆಲಿನ ಜ್ಞಾನಿಗಳನ್ನು ಕೊಲ್ಲಲ್ಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಆಲೋಚನೆ ಯಿಂದಲೂ ಜ್ಞಾನದಿಂದಲೂ ಉತ್ತರಕೊಟ್ಟನು;
Cross references
ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ--ಕೇಳಿರಿ, ಕೇಳಿರಿ, ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸವಿಾಪಿ ಸಲು ಬರಹೇಳಿರಿ ಎಂದು ಕೂಗಿ ಬೇಡಿಕೊಂಡಳು.
ನಾನು ಈ ಜ್ಞಾನವನ್ನೂ ಸಹ ಸೂರ್ಯನ ಕೆಳಗೆ ನೋಡಿದೆನು; ಇದು ನನಗೆ ದೊಡ್ಡದಾಗಿ ಕಾಣಿಸಿತು.
ಆಗ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನು ಅವರಿಗೂ ಅವರ ಮನುಷ್ಯರಿಗೂ ಪ್ರಮಾಣಮಾಡಿ ಹೇಳಿದ್ದೇನಂದರೆ--ಕಸ್ದೀಯರಿಗೆ ಸೇವೆ ಮಾಡುವದಕ್ಕೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು ಬಾಬೆ ಲಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೇದಾ ಗುವದು.
ಆದದರಿಂದ ದಾನಿಯೇಲನು ಬಾಬೆಲಿನ ಜ್ಞಾನಿ ಗಳನ್ನು ನಾಶಮಾಡಲು ಅರಸನ ಆಜ್ಞೆಯನ್ನು ಹೊಂದಿದ ಅರ್ಯೋಕನ ಹತ್ತಿರ ಹೋಗಿ ಅವನಿಗೆ ಹೇಳಿದ್ದೇ ನಂದರೆ--ನೀನು ಬಾಬೆಲಿನ ಜ್ಞಾನಿಗಳನ್ನು ನಾಶಮಾಡ ಬೇಡ; ನನ್ನನ್ನು ಅರಸನ ಮುಂದೆ ಕರೆದುಕೊಂಡು ಹೋಗು ಆಗ ನಾನು ಅರಸನಿಗೆ ಅರ್ಥವನ್ನು ತಿಳಿಸು ತ್ತೇನೆ ಅಂದನು.