ನೆಬೂಕದ್ನೆಚ್ಚರನ ಆಳಿಕೆಯ ಎರಡನೆಯ ವರುಷದಲ್ಲಿ ನೆಬೂಕದ್ನೆಚ್ಚರನು ಕಂಡ ಕನಸುಗಳ ಪರಿಣಾಮದಿಂದ ಅವನ ಆತ್ಮವು ಕಳವಳ ಗೊಂಡು ನಿದ್ರೆಯು ಅವನನ್ನು ಬಿಟ್ಟು ಹೋಯಿತು.
Cross references
ಅವರಿಬ್ಬರಿಗೂ ಅಂದರೆ ಐಗುಪ್ತದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ ರೊಟ್ಟಿ ಗಾರನಿಗೂ ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿನ ಪ್ರಕಾರ ಅರ್ಥವಿತ್ತು.
ಪೂರ್ಣವಾದ ಎರಡು ವರುಷಗಳ ಕೊನೆಯಲ್ಲಿ ಫರೋಹನು ಕನಸನ್ನು ಕಂಡನು.
ಬೆಳಿಗ್ಗೆ ಅವನ ಆತ್ಮವು ಕಳವಳಗೊಂಡಿತು. ಆದದರಿಂದ ಅವನು ಐಗುಪ್ತದ ಎಲ್ಲಾ ಮಂತ್ರವಾದಿ ಗಳನ್ನೂ ಎಲ್ಲಾ ಜ್ಞಾನಿಗಳನ್ನೂ ಕರೇಕಳುಹಿಸಿದನು. ಫರೋಹನು ಅವರಿಗೆ ತನ್ನ ಕನಸನ್ನು ತಿಳಿಸಿದಾಗ ಅವನಿಗೆ ಅವುಗಳ ಅರ್ಥವನ್ನು ಹೇಳುವವರು ಯಾರೂ ಇರಲಿಲ್ಲ.
ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು.
ಆ ರಾತ್ರಿ ಅರಸನಿಗೆ ನಿದ್ರೆ ಬಾರದ್ದದರಿಂದ ವೃತಾಂತಗಳನ್ನು ಬರೆದಿರುವ ಪುಸ್ತಕವನ್ನು ತಕ್ಕೊಂಡು ಬರಲು ಹೇಳಿದನು.
ಸ್ವಪ್ನದಲ್ಲಿ ರಾತ್ರಿಯ ದರ್ಶನ ದಲ್ಲಿ; ಗಾಢ ನಿದ್ರೆಯು ಮನುಷ್ಯರ ಮೇಲೆ ಬೀಳುವಾಗ ಮಂಚದ ಮೇಲಿನ ತೂಕಡಿಕೆಗಳಲ್ಲಿ
ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆ ಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಉಂಟಾ ಯಿತು.
ಯೆಹೂದದ ಅರಸನಾದ ಯೆಹೋಯಾ ಕೀಮನ ಆಳಿಕೆಯ ಮೂರನೆಯ ವರುಷ ದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂ ಸಲೇಮಿಗೆ ಬಂದು ಮುತ್ತಿಗೆ ಹಾಕಿದನು.
ಆಗ ಅರಸನು ಅವರಿಗೆ--ನಾನು ಒಂದು ಕನಸ್ಸು ಕಂಡಿದ್ದೇನೆ; ಆ ಕನಸಿನ ಅರ್ಥವನ್ನು ತಿಳಿಯುವದಕ್ಕಾಗಿ ನನ್ನ ಆತ್ಮವು ಕಳವಳಗೊಂಡಿದೆ ಅಂದನು.
ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.
ಆ ಮೇಲೆ ಅರಸನು ತನ್ನ ಅರಮನೆಗೆ ಹಿಂತಿರುಗಿ ಉಪವಾಸ ದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳು ಅವನ ಮುಂದೆ ತರಲ್ಪಡಲಿಲ್ಲ; ನಿದ್ರೆಯು ಅವನನ್ನು ಬಿಟ್ಟು ಹೋಯಿತು.
ದಾನಿಯೇಲನೆಂಬ ನಾನು ನನ್ನ ಶರೀರದೊಳ ಗಿರುವ ಆತ್ಮದಲ್ಲಿ ನೊಂದು ನನ್ನ ಮನಸ್ಸಿನ ದರ್ಶನಗಳ ನಿಮಿತ್ತ ಕಳವಳಗೊಂಡೆನು.