ಆಕಾಶದಲ್ಲಿ ಉಪ್ಪರಿಗೆ ಗಳನ್ನು ಕಟ್ಟಿಕೊಂಡು ಭೂಮಿಯ ಮೇಲೆ ತಮ ತಂಡಗಳನ್ನು ಸ್ಥಾಪಿಸಿ ಸಮುದ್ರದ ನೀರನ್ನು ಕರೆದು ಅದನ್ನು ಭೂಮಿಯ ಮೇಲೆ ಒಯ್ಯುವಂತೆ ಮಾಡು ವವನು ಆತನೇ. ಆತನ ಹೆಸರು ಕರ್ತನು.
Cross references
ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು.
ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಅಂದರೆ ಅದೇ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾ ಅಗಾಧದ ಬುಗ್ಗೆಗಳೆಲ್ಲಾ ಒಡೆದವು. ಆಕಾಶದ ಕಿಟಕಿ ಗಳು ತೆರೆಯಲ್ಪಟ್ಟವು.
ನಾಲ್ವತ್ತು ದಿನ ಭೂಮಿಯ ಮೇಲೆ ಪ್ರಳಯವು ಇತ್ತು; ಆಗ ನೀರುಗಳು ಹೆಚ್ಚಿ ನಾವೆಯನ್ನು ಎತ್ತಲು ಅದು ಭೂಮಿಯಿಂದ ಎತ್ತಲ್ಪಟ್ಟಿತು.
ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು ಅಂದನು.
ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.
ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.
ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ.
ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
ಏಳು ನಕ್ಷತ್ರಗಳನ್ನೂ ಮೃಗಶಿರವನ್ನೂ ಉಂಟು ಮಾಡಿ ಮರಣದ ನೆರಳನ್ನು ಉದಯಕ್ಕೆ ಬದಲಿಸಿ, ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲು ಮಾಡಿ ಸಮುದ್ರದ ನೀರನ್ನು ಬರಮಾಡಿ ಅವುಗಳನ್ನು ಭೂಮಿಯ ಮೇಲೆ ಸುರಿಸುವ ಕರ್ತನೆಂಬ ಹೆಸರುಳ್ಳಾತನನ್ನೇ ಹುಡು ಕಿರಿ.