Home Bibles ಆಮೋಸ 1:13 · ಕನ್ನಡ ಬೈಬಲ್
ಆಮೋಸ 1:13 · ಕನ್ನಡ ಬೈಬಲ್

ಕರ್ತನು ಹೀಗೆ ಹೇಳುತ್ತಾನೆ--ಅಮ್ಮೋನಿನ ಮಕ್ಕಳ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ವಾಗಿ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವ ದಿಲ್ಲ; ತಮ್ಮ ಮೇರೆಯನ್ನು ವಿಸ್ತಾರ ಮಾಡುವದಕ್ಕಾಗಿ ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿದ್ದಾರೆ.

Cross references

ದ್ವಿತೀಯೋಪದೇಶಕಾಂಡ 2:19

ನಾನು ಅಮ್ಮೋನನ ಮಕ್ಕಳ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ ಅಂದನು.

ದ್ವಿತೀಯೋಪದೇಶಕಾಂಡ 23:3

ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು.

ನ್ಯಾಯಾಧಿಪತಿಗಳು 10:7

ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು.

ನ್ಯಾಯಾಧಿಪತಿಗಳು 11:15

ಅವರಿಗೆ--ಯೆಫ್ತಾಹನು ಹೇಳುವ ಮಾತು ಇದೇ--ಇಸ್ರಾಯೇಲ್‌ ಮೋವಾಬಿನ ದೇಶವನ್ನಾ ದರೂ ಅಮ್ಮೋನನ ಮಕ್ಕಳ ದೇಶವನ್ನಾದರೂ ತಕ್ಕೊಂಡ ದ್ದಿಲ್ಲ.

1 ಸಮುವೇಲ 11:1

ಅಮ್ಮೋನಿಯನಾದ ನಾಹಾಷನು ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ವಿರೋಧ ವಾಗಿ ದಂಡು ಇರಿಸಿದನು. ಆಗ ಯಾಬೇಷಿನ ಜನರೆ ಲ್ಲರು ನಾಹಾಷನಿಗೆ--ನೀನು ನಮ್ಮ ಸಂಗಡ ಒಡಂಬ ಡಿಕೆ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು.

2 ಸಮುವೇಲ 10:1

ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು.

2 ಸಮುವೇಲ 12:31

ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು.

2 ಅರಸುಗಳು 8:12

ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್‌ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.

2 ಅರಸುಗಳು 15:16

ಆಗ ಮೆನಹೇಮನು ತಿಪ್ಸಹನ್ನೂ ಅದರಲ್ಲಿ ಇದ್ದ ಎಲ್ಲರನ್ನೂ ತಿರ್ಚ ಮೊದಲುಗೊಂಡು ಅದರ ಮೇರೆಗಳನ್ನೂ ಹಾಳುಮಾಡಿದನು. ಅವರು ತಮ್ಮ ಬಾಗಲುಗಳನ್ನು ತನಗೆ ತೆರೆಯದೆ ಇದ್ದದರಿಂದ ಅವರನ್ನು ಹೊಡೆದನು; ಅದರಲ್ಲಿರುವ ಗರ್ಭಿಣಿಯರನ್ನೆಲ್ಲಾ ಸೀಳಿಸಿದನು.

2 ಅರಸುಗಳು 24:2

ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.

2 ದಿನವೃತ್ತಾಂತ 20:1

ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು.

2 ದಿನವೃತ್ತಾಂತ 20:10

ಈಗ ಇಗೋ, ಅಮ್ಮೋನ್‌ ಮೋವಾಬ್‌, ಸೇಯಾರ್‌ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು.

ನೆಹೆಮ್ಯ 2:19

ಆದರೆ ಹೋರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯನ ದಾಸನಾದ ಟೋಬೀಯನೂ ಅರಬಿ ಯನಾದ ಗೆಷೆಮನೂ ಇದನ್ನು ಕೇಳಿದಾಗ ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ--ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರಿಗಿ ಬೀಳುವಿರೋ ಅಂದರು.ಆಗ ನಾನು ಅವರಿಗೆ ಪ್ರತ್ಯುತ್ತರವಾಗಿ--ಪರಲೋಕದ ದೇವರು ನಮಗೆ ಸಫಲ ಮಾಡುವನು; ಆತನ ಸೇವಕರಾದ ನಾವು ಎದ್ದು ಕಟ್ಟುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಪಾಲಾದರೂ ಹಕ್ಕಾದರೂ ಜ್ಞಾಪಕಾರ್ಥವಾದ ಗುರುತಾದರೂ ಇಲ್ಲವೆಂದು ಹೇಳಿದನು.

ನೆಹೆಮ್ಯ 4:7

ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ

ಕೀರ್ತನೆಗಳು 83:7

ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ;

ಯೆಶಾಯ 5:8

ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!

ಯೆರೆಮಿಯ 49:1

ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.

ಯೆಹೆಜ್ಕೇಲ 21:28

ಮನುಷ್ಯಪುತ್ರನೇ, ನೀನು ಪ್ರವಾದಿಸಿ ಹೇಳ ಬೇಕಾದದ್ದೇನಂದರೆ--ದೇವರಾದ ಕರ್ತನು ಅಮ್ಮೋನಿ ಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾನೆ--ಹೌದು, ನೀನು ಹೀಗೆ ಹೇಳು, ಹಿರಿದ ಕತ್ತಿಯು ಥಳಥಳಿಸುವದ ರಿಂದ ಸಂಹರಿಸುವದಕ್ಕೆ ಹಿಡಿದಿದೆ; ಮಿಂಚುವಂತೆ ಬಹಳವಾಗಿ ಮಸೆದಿದೆ.

ಯೆಹೆಜ್ಕೇಲ 25:1

ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--

ಯೆಹೆಜ್ಕೇಲ 25:2

ಮನುಷ್ಯಪುತ್ರನೇ, ನೀನು ಅಮ್ಮೋನನ ಕುಮಾರರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು;

ಯೆಹೆಜ್ಕೇಲ 35:10

ಕರ್ತನು ಅವುಗಳಲ್ಲಿರುವದರಿಂದ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನವಾಗು ವವು. ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.

ಹೊಶೇಯ 13:16

ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.

ಹೊಶೇಯ 14:1

ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ;

ಆಮೋಸ 1:3

ಕರ್ತನು ಹೀಗೆ ಹೇಳುತ್ತಾನೆ--ದಮಸ್ಕದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅವರನ್ನು ದಂಡಿಸದೆ ಹಿಂತಿರುಗುವದಿಲ್ಲ; ಅವರು ಕಬ್ಬಿಣದ ಆಯುಧಗಳಿಂದ ಗಿಲ್ಯಾದನ್ನು ಬಡಿದಿರುವರು.

ಹಬಕ್ಕೂಕ 2:5

ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.

ಸೆಫನ್ಯ 2:8

ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ.

Interlinear

Choose Theme