ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
Cross references
ಇದಲ್ಲದೆ ದೇವರು ಅಬ್ರಹಾಮನಿಗೆ--ನೀನು ನಿನ್ನ ತರುವಾಯ ಬರುವ ಸಂತಾನಗಳೂ ತಲತಲಾಂತರ ಗಳಲ್ಲಿ ನನ್ನ ಒಡಂಬಡಿಕೆಯನ್ನು ಕೈಕೊಳ್ಳಬೇಕು.
ಕರ್ತನು ತಾನು ಹೇಳಿದ ಹಾಗೆ ಸಾರಳನ್ನು ದರ್ಶಿಸಿ ತಾನು ಹೇಳಿದಂತೆ ಸಾರಳಿಗೆ ಮಾಡಿದನು.
ಆಕೆಯು ಬಂಜೆ ಯಾಗಿದ್ದದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಕರ್ತನನ್ನು ಬೇಡಿಕೊಂಡನು. ಕರ್ತನು ಅವನ ಬೇಡಿಕೆ ಯನ್ನು ಕೇಳಿದನು. ಆದದರಿಂದ ಅವನ ಹೆಂಡತಿಯಾದ ರೆಬೆಕ್ಕಳು ಗರ್ಭಿಣಿಯಾದಳು.
ಲೇಯಳು ತಾತ್ಸಾರವಾದಳೆಂದು ಕರ್ತನು ನೋಡಿ ಅವಳ ಗರ್ಭವನ್ನು ತೆರೆದನು. ಆದರೆ ರಾಹೇಲಳು ಬಂಜೆಯಾಗಿದ್ದಳು.
ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.
(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್ ಮಕ್ಕಳ ಹೆಸರುಗಳು ಇವೇ:
ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನ ಮಕ್ಕಳು ಏಸಾವನು, ಇಸ್ರಾಯೇಲನು.
ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,
ಅಬ್ರಹಾಮನಿಂದ ಇಸಾಕನು ಹುಟ್ಟಿದನು; ಇಸಾಕ ನಿಂದ ಯಾಕೋಬನು ಹುಟ್ಟಿದನು; ಯಾಕೋಬ ನಿಂದ ಯೂದನೂ ಅವನ ಸಹೋದರರೂ ಹುಟ್ಟಿ ದರು;
ಹಾಗಿದ್ದರೆ ಮೋಶೆಯು ನಿಮಗೆ ಸುನ್ನತಿಯನ್ನು ಕೊಟ್ಟನು; (ಅದು ಮೋಶೆಯದಲ್ಲ, ಆದರೆ ಅದು ಪಿತೃಗಳದೇ). ನೀವು ಸಬ್ಬತ್ ದಿನದಲ್ಲಿ ಮನುಷ್ಯನಿಗೆ ಸುನ್ನತಿ ಮಾಡುತ್ತೀರಿ.
ಜನರೇ, ಸಹೋದರರೇ, ಮೂಲಪಿತೃವಾದ ದಾವೀದನ ವಿಷಯವಾಗಿ ನಿಮ್ಮೊಂದಿಗೆ ಧಾರಾಳವಾಗಿ ಮಾತನಾಡುತ್ತೇನೆ. ಅವನು ಸತ್ತು ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿದೆ.
ಹಾಗಾದರೆ ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗು ವದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವದಕ್ಕೆ ಮೊದಲೇ ಎಣಿಸಲ್ಪಟ್ಟಿತು.
ಈ ವಾಗ್ದಾನದ ಮಾತೇನಂ ದರೆ--ಮುಂದಿನ ವರುಷದ ಇದೇ ಕಾಲದಲ್ಲಿ ನಾನು ಬರುವೆನು. ಆಗ ಸಾರಳಿಗೆ ಮಗನು ಇರುವನು ಎಂಬದೇ.
ಸಹೊದರರೇ, ಮನುಷ್ಯ ರೀತಿಯಲ್ಲಿ ನಾನು ಮಾತನಾಡುತ್ತೇನೆ. ಸ್ಥಿರಪಡಿಸಿದ ಒಂದು ಒಡಂಬಡಿಕೆ ಯು ಕೇವಲ ಮನುಷ್ಯನದಾಗಿದ್ದರೂ ಅದನ್ನು ಯಾರೂ ರದ್ದು ಮಾಡುವದಿಲ್ಲ ಇಲ್ಲವೆ ಅದಕ್ಕೆ ಹೆಚ್ಚೇನೂ ಕೂಡಿಸುವದಿಲ್ಲ.
ನಾನು ಹೇಳುವದೇನಂದರೆ, ದೇವರು ಕ್ರಿಸ್ತನಲ್ಲಿ ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರುಷಗಳ ಮೇಲೆ ಬಂದ ನ್ಯಾಯಪ್ರಮಾಣವು ರದ್ದು ಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ.
ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.