Home Bibles ☰ Books ಅಪೋಸ್ತಲರ ಕೃತ್ಯಗಳು 7:53 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 7:53 · ಕನ್ನಡ ಬೈಬಲ್

ದೇವದೂತರ ಮೂಲಕ ನೇಮಕವಾದ ನ್ಯಾಯ ಪ್ರಮಾಣವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸಲಿಲ್ಲ ಎಂದು ಹೇಳಿದನು.

Cross references

ನಿರ್ಗಮಕಾಂಡ 19:1

ಇಸ್ರಾಯೇಲ್‌ ಮಕ್ಕಳು ಐಗುಪ್ತವನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಅರಣ್ಯಕ್ಕೆ ಬಂದರು.

ದ್ವಿತೀಯೋಪದೇಶಕಾಂಡ 33:2

ಕರ್ತನು ಸೀನಾಯಿ ಬೆಟ್ಟದಿಂದ ಬಂದನು, ಸೇಯಾರಿನಿಂದ ಅವರಿಗೆ ಉದಯಿಸಿದನು. ಪಾರಾನ್‌ ಬೆಟ್ಟದಿಂದ ಪ್ರಕಾಶಿಸಿದನು, ಹತ್ತು ಸಾವಿರ ಪರಿಶುದ್ಧರ ಸಂಗಡ ಬಂದನು. ಆತನ ಬಲಪಾರ್ಶ್ವದಿಂದ ಅವರಿಗೆ ಬೆಂಕಿಯ ನ್ಯಾಯಪ್ರಮಾಣವು ಹೊರಟಿತು.

ಕೀರ್ತನೆಗಳು 68:17

ದೇವರ ರಥಗಳು ಇಪ್ಪತ್ತು ಸಾವಿರವು, ಸಾವಿರಾರು ದೂತರು ಗಳು; ಕರ್ತನು ಸೀನಾಯಿಯಲ್ಲಿ ಇದ್ದ ಹಾಗೆ ಅವರೊಳಗೆ ಪರಿಶುದ್ಧ ಸ್ಥಳದಲ್ಲಿ ಇದ್ದಾನೆ.

ಯೆಹೆಜ್ಕೇಲ 20:18

ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;

ಯೋಹಾನ 7:19

ಮೋಶೆಯು ನಿಮಗೆ ನ್ಯಾಯ ಪ್ರಮಾಣವನ್ನು ಕೊಟ್ಟಾಗ್ಯೂ ನಿಮ್ಮಲ್ಲಿ ಒಬ್ಬನೂ ಆ ನ್ಯಾಯಪ್ರಮಾಣವನ್ನು ಕೈಕೊಳ್ಳಲಿಲ್ಲವಲ್ಲಾ; ನೀವು ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 7:38

ಇವನೇ ಸೀನಾಯಿ ಬೆಟ್ಟದಲ್ಲಿ ತನ್ನೊಡನೆಯೂ ಪಿತೃಗಳೊಡನೆಯೂ ಮಾತನಾಡಿದ ದೂತನೊಂದಿಗೆ ಅಡವಿಯಲ್ಲಿದ್ದ ಸಭೆ ಯಲ್ಲಿದ್ದುಕೊಂಡು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು.

ರೋಮಾಪುರದವರಿಗೆ 2:23

ನ್ಯಾಯಪ್ರಮಾಣದಲ್ಲಿ ಹೆಚ್ಚಳಪಡುವ ನೀನು ನ್ಯಾಯಪ್ರಮಾಣವನ್ನು ವಿಾರುವದರಿಂದ ದೇವ ರನ್ನು ಅವಮಾನಪಡಿಸುತ್ತೀಯೋ?

ಗಲಾತ್ಯದವರಿಗೆ 3:19

ಹಾಗಾದರೆ ನ್ಯಾಯಪ್ರಮಾಣವು ಯಾತಕ್ಕೆ? ವಾಗ್ದಾನದ ಸಂತತಿಯಾದಾತನು ಬರುವತನಕ ದೇವರು ಇಂಥಿಂಥದ್ದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು.

ಗಲಾತ್ಯದವರಿಗೆ 6:13

ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.

ಹೆಬ್ರಿಯರಿಗೆ 2:2

ಯಾಕಂದರೆ ದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ವಿಾರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯ ವಾದ ಪ್ರತಿಫಲ ಹೊಂದಿದ ಮೇಲೆ

Interlinear

Choose Theme