ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು.
Cross references
ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
ನೀನು ತಿರಿಗಿ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.
ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಅಂದರೆ ಗಂಡು ಇಲ್ಲವೆ ಹೆಣ್ಣಿನ ಆಕಾರದಲ್ಲಿ ಯಾವ ವಿಧವಾದ ಪ್ರತಿಮೆ ಯನ್ನೂ
ಮೇಲಿನ ಆಕಾಶ ದಲ್ಲಾಗಲಿ ಕೆಳಗಿನ ಭೂಮಿಯಲ್ಲಾಗಲಿ ಭೂಮಿಯ ಕೆಳಗಿನ ನೀರುಗಳಲ್ಲಾಗಲಿ ಇರುವಂಥ ಯಾವ ದೊಂದರ ರೂಪದ ವಿಗ್ರಹವನ್ನು ನಿನಗೆ ಮಾಡಿ ಕೊಳ್ಳಬಾರದು,
ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.
ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ
ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.
ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.
ಆದರೆ ನೀವು ನಿಮ ಗೋಸ್ಕರ ಮಾಡಿಕೊಂಡ ಮೋಲೇಕನ ಗುಡಾರವನ್ನು, ನಿಮ್ಮ ಕಿಯೂನ್ ಎಂಬ ವಿಗ್ರಹವನ್ನು, ನಿಮ್ಮ ಮೋಲೇ ಕನ ದೇವತೆಯ ನಕ್ಷತ್ರವನ್ನು ಹೊತ್ತುಕೊಂಡು ಹೋಗ ಬೇಕಾಗುವದು.ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.