Home Bibles ಅಪೋಸ್ತಲರ ಕೃತ್ಯಗಳು 7:34 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 7:34 · ಕನ್ನಡ ಬೈಬಲ್

ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.

Cross references

ಆದಿಕಾಂಡ 11:5

ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.

ಆದಿಕಾಂಡ 11:7

ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.

ಆದಿಕಾಂಡ 18:21

ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಅದರ ಕೂಗಿನ ಪ್ರಕಾರವೇ ಅವರು ಮಾಡಿದ್ದಾರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುವೆನು ಅಂದನು.

ನಿರ್ಗಮಕಾಂಡ 2:23

ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್‌ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.

ನಿರ್ಗಮಕಾಂಡ 3:7

ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.

ನಿರ್ಗಮಕಾಂಡ 3:14

ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕು ಅಂದನು.

ನಿರ್ಗಮಕಾಂಡ 4:31

ಕರ್ತನು ಇಸ್ರಾಯೇಲ್‌ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

ನಿರ್ಗಮಕಾಂಡ 6:5

ಐಗುಪ್ತ್ಯರು ದಾಸರ ನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲ್‌ ಮಕ್ಕಳ ಮೂಲುಗುವಿಕೆಯನ್ನು ಕೇಳಿ ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.

ಅಂಕೆಗಳ ಪುಸ್ತಕ 11:17

ನಾನು ಇಳಿದು ಬಂದು ನಿನ್ನ ಸಂಗಡ ಮಾತನಾಡಿ ನಿನ್ನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಅವರ ಮೇಲೆ ಇಡುವೆನು; ಆಗ ನೀನು ಜನರ ಭಾರವನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಅದನ್ನು ಹೊರುವರು.

ನ್ಯಾಯಾಧಿಪತಿಗಳು 2:18

ಕರ್ತನು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿ ಆತನು ನ್ಯಾಯಾಧಿಪತಿಯ ಸಂಗಡ ಇದ್ದು ಆ ನ್ಯಾಯಾಧಿಪತಿಯ ದಿನಗಳೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದನು. ಯಾಕಂದರೆ ಅವರು ತಮ್ಮನ್ನು ಬಾಧಿಸಿ ಶ್ರಮೆಪಡಿಸುವವರ ನಿಮಿತ್ತ ಗೋಳಾಡುವದರಿಂದ ಕರ್ತನು ಪಶ್ಚಾತ್ತಾಪಪಟ್ಟನು.

ನ್ಯಾಯಾಧಿಪತಿಗಳು 10:15

ಇಸ್ರಾಯೇಲ್‌ ಮಕ್ಕಳು ಕರ್ತ ನಿಗೆ--ನಾವು ಪಾಪಮಾಡಿದೆವು; ನೀನು ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿ ತೋರುವದೆಲ್ಲಾ ನಮಗೆ ಮಾಡು. ಆದರೆ ಈಹೊತ್ತು ನಮ್ಮನ್ನು ರಕ್ಷಿಸು ಎಂದು ಬೇಡಿ ಕೊಂಡರು.

ನೆಹೆಮ್ಯ 9:9

ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ.

ಕೀರ್ತನೆಗಳು 105:26

ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.

ಕೀರ್ತನೆಗಳು 106:44

ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು

ಕೀರ್ತನೆಗಳು 144:5

ಓ ಕರ್ತನೇ, ನಿನ್ನ ಆಕಾಶಗಳನ್ನು ತಗ್ಗಿಸಿ ಇಳಿದು ಬಾ; ಬೆಟ್ಟಗಳನ್ನು ಮುಟ್ಟು; ಆಗ ಅವು ಹೊಗೆ ಹಾಯುವವು.

ಯೆಶಾಯ 63:8

ಆತನು--ನಿಶ್ಚಯವಾಗಿ ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ ಎಂದು ಹೇಳಿದನು; ಆದದರಿಂದ ಅವರಿಗೆ ರಕ್ಷಕನಾಗಿದ್ದನು.

ಯೆಶಾಯ 64:1

ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,

ಹೊಶೇಯ 12:13

ಪ್ರವಾದಿಯಿಂದ ಕರ್ತನು ಇಸ್ರಾಯೇಲನ್ನು ಐಗುಪ್ತದೊಳಗಿಂದ ಬರಮಾಡಿ ಆ ಪ್ರವಾದಿ ಯಿಂದಲೇ ಆತನು ಅವನನ್ನು ಕಾಪಾಡಿದನು.ಆದ ರೂ ಎಫ್ರಾಯಾಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದದರಿಂದ ಆತನು ಅದರ ರಕ್ತವನ್ನು ಅದರ ಮೇಲೆ ಬರಮಾಡುವನು; ಅವನ ನಿಂದೆಯನ್ನು ಅವನ ಕರ್ತನು ಅವನ ಮೇಲೆ ಬರಮಾಡುವನು.

ಮೀಕ 6:4

ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು.

ಯೋಹಾನ 3:13

ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ.

ಯೋಹಾನ 6:38

ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು.

Interlinear

Choose Theme