Home Bibles ಅಪೋಸ್ತಲರ ಕೃತ್ಯಗಳು 28:31 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 28:31 · ಕನ್ನಡ ಬೈಬಲ್

ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.

Cross references

ಮತ್ತಾಯ 4:23

ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.

ಮಾರ್ಕ 1:14

ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ--

ಲೂಕ 8:1

ಇದಾದ ಮೇಲೆ ಆತನು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಎಲ್ಲಾ ಕಡೆಯಲ್ಲಿ ಹೋಗಿ ದೇವರರಾಜ್ಯದ ಸಂತೋಷಸಮಾಚಾರವನ್ನು ಸಾರಿ ತಿಳಿಸುತ್ತಿದ್ದನು. ಹನ್ನೆರಡು ಮಂದಿ (ಶಿಷ್ಯರು) ಆತನೊಂದಿಗೆ ಇದ್ದರು.

ಅಪೋಸ್ತಲರ ಕೃತ್ಯಗಳು 4:29

ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ

ಅಪೋಸ್ತಲರ ಕೃತ್ಯಗಳು 4:31

ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.

ಅಪೋಸ್ತಲರ ಕೃತ್ಯಗಳು 5:42

ಪ್ರತಿದಿನ ದೇವಾಲಯದಲ್ಲಿಯೂ ಪ್ರತಿಯೊಂದು ಮನೆಯ ಲ್ಲಿಯೂ ಯೇಸು ಕ್ರಿಸ್ತನ ವಿಷಯವಾಗಿ ಎಡೆಬಿಡದೆ ಬೋಧಿಸುತ್ತಾ ಸಾರುತ್ತಾ ಇದ್ದರು.

ಅಪೋಸ್ತಲರ ಕೃತ್ಯಗಳು 8:12

ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯ ದಲ್ಲಿಯೂ ಸಾರುತ್ತಾ ಇರಲು ಗಂಡಸರೂ ಹೆಂಗಸರೂ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡರು.

ಅಪೋಸ್ತಲರ ಕೃತ್ಯಗಳು 20:25

ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು.

ಅಪೋಸ್ತಲರ ಕೃತ್ಯಗಳು 23:11

ಮರುದಿನ ರಾತ್ರಿ ಕರ್ತನು ಅವನ ಬಳಿಯಲ್ಲಿ ನಿಂತು--ಪೌಲನೇ, ಧೈರ್ಯವಾಗಿರು; ಯೆರೂಸ ಲೇಮಿನಲ್ಲಿ ನನ್ನ ವಿಷಯವಾಗಿ ನೀನು ಸಾಕ್ಷಿ ಹೇಳಿ ದಂತೆ ರೋಮ್‌ನಲ್ಲಿಯೂ ಸಾಕ್ಷಿ ಹೇಳತಕ್ಕದ್ದು ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 28:23

ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು.

ಎಫೆಸದವರಿಗೆ 6:19

ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.

ಫಿಲಿಪ್ಪಿಯವರಿಗೆ 1:14

ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.

ಕೊಲೊಸ್ಸೆಯವರಿಗೆ 4:3

ನಾವು ಕ್ರಿಸ್ತನ ಮರ್ಮವನ್ನು ಮಾತನಾಡುವಂತೆ ದೇವರು ಅನುಕೂಲವಾದ ಬಾಗಲನ್ನು ನಮಗೆ ತೆರೆಯುವ ಹಾಗೆ ನಮಗೋಸ್ಕರವೂ ಪ್ರಾರ್ಥಿಸಿರಿ; ಇದಕ್ಕೋಸ್ಕರವೇ ನಾನು ಸೆರೆಯಲ್ಲಿದ್ದೇನಲ್ಲಾ;

2 ತಿಮೋಥೆಯ 2:9

ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.

2 ತಿಮೋಥೆಯ 4:17

ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.

Interlinear

Interlinear data is unavailable for this verse.

Choose Theme