Home Bibles ☰ Books ಅಪೋಸ್ತಲರ ಕೃತ್ಯಗಳು 28:19 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 28:19 · ಕನ್ನಡ ಬೈಬಲ್

ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ.

Cross references

ಅಪೋಸ್ತಲರ ಕೃತ್ಯಗಳು 25:10

ಆಗ ಪೌಲನು--ನ್ಯಾಯವಿಚಾರಣೆ ಮಾಡತಕ್ಕ ಕೈಸರನ ನ್ಯಾಯಾಸನದ ಮುಂದೆ ನಾನು ನಿಂತಿದ್ದೇನೆ; ನಾನು ಯೆಹೂದ್ಯರಿಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ ಎಂಬದು ನಿನಗೆ ಚೆನ್ನಾಗಿ ತಿಳಿದದೆ.

ಅಪೋಸ್ತಲರ ಕೃತ್ಯಗಳು 25:21

ಆದರೆ ಔಗುಸ್ತನ ವಿಚಾರಣೆಗಾಗಿ ತನ್ನನ್ನು ಕಾಯಬೇಕೆಂದು ಪೌಲನು ಬೇಡಿಕೊಂಡ ಪ್ರಕಾರ ಕೈಸರನ ಬಳಿಗೆ ಅವನನ್ನು ನಾನು ಕಳುಹಿಸುವ ವರೆಗೆ ಕಾಯಬೇಕೆಂದು ನಾನು ಅಪ್ಪಣೆಕೊಟ್ಟೆನು.

ಅಪೋಸ್ತಲರ ಕೃತ್ಯಗಳು 25:25

ಆದರೆ ಮರಣದಂಡನೆಗೆ ಕಾರಣವಾದ ಯಾವ ದನ್ನೂ ಇವನು ಮಾಡಲಿಲ್ಲವೆಂದು ನಾನು ಕಂಡು ಕೊಂಡೆನು. ತಾನೇ ಔಗುಸ್ತನ ಮುಂದೆ ಹೇಳಿಕೊಳ್ಳು ತ್ತೇನೆಂದು ಬೇಡಿಕೊಂಡದ್ದರಿಂದ ಇವನನ್ನು ಕಳುಹಿಸು ವದಕ್ಕೆ ನಾನು ತೀರ್ಮಾನಿಸಿದ್ದೇನೆ.

ಅಪೋಸ್ತಲರ ಕೃತ್ಯಗಳು 26:32

ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.

ರೋಮಾಪುರದವರಿಗೆ 12:19

ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.

1 ಪೇತ್ರ 2:22

ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.

Interlinear

Choose Theme