Home Bibles ಅಪೋಸ್ತಲರ ಕೃತ್ಯಗಳು 27:29 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 27:29 · ಕನ್ನಡ ಬೈಬಲ್

ನಾವು ಬಂಡೆಗಳನ್ನು ತಾಕೇವೆಂದು ಭಯ ಪಟ್ಟಾಗ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರು ಗಳನ್ನು ಬಿಟ್ಟು ಯಾವಾಗ ಬೆಳಗಾದೀತು ಎಂದು ಹಾರೈ ಸುತ್ತಿದ್ದರು.

Cross references

ದ್ವಿತೀಯೋಪದೇಶಕಾಂಡ 28:67

ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.

ಕೀರ್ತನೆಗಳು 130:6

ಉದಯಕ್ಕಾಗಿ ಕಾದುಕೊಳ್ಳುವವ ರಿಗಿಂತ ಹೌದು, ಉದಯಕ್ಕಾಗಿ ಕಾದುಕೊಳ್ಳುವವರಿ ಗಿಂತ ನನ್ನ ಪ್ರಾಣವು ಕರ್ತನಿಗಾಗಿ ನಿರೀಕ್ಷಿಸುತ್ತದೆ.

ಅಪೋಸ್ತಲರ ಕೃತ್ಯಗಳು 27:17

ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು.

ಅಪೋಸ್ತಲರ ಕೃತ್ಯಗಳು 27:26

ಹೇಗಿದ್ದರೂ ನಾವು ಒಂದು ದ್ವೀಪಕ್ಕೆ ಸೇರಲೇಬೇಕಾಗಿದೆ ಅಂದನು.

ಅಪೋಸ್ತಲರ ಕೃತ್ಯಗಳು 27:30

ನಾವಿಕರು ಹಡಗಿನ ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ನೆವದಿಂದ ದೋಣಿ ಯನ್ನು ಸಮುದ್ರದಲ್ಲಿ ಇಳಿಸಿ ಅವರು ಹಡಗಿನಿಂದ ತಪ್ಪಿಸಿಕೊಂಡು ಹೋಗಬೇಕೆಂದಿದ್ದರು:

ಅಪೋಸ್ತಲರ ಕೃತ್ಯಗಳು 27:40

ಅವರು ಲಂಗರುಗಳನ್ನು ತೆಗೆದು ಸಮುದ್ರದಲ್ಲಿ ಬಿಟ್ಟು ಚುಕ್ಕಾ ಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಗಳನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡಕ್ಕೆ ನಡಿಸುತ್ತಿದ್ದರು.

ಹೆಬ್ರಿಯರಿಗೆ 6:19

ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಖಂಡಿತವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಿರುವಲ್ಲಿಗೆ ಪ್ರವೇಶಿಸುವಂಥದು.ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ಮಾಡಲ್ಪಟ್ಟು ನಮಗೋಸ್ಕರ ಮುಂದಾಗಿ ಅದರೊಳಗೆ ಪ್ರವೇಶಿಸಿದ್ದಾನೆ.

Interlinear

Choose Theme