Home Bibles ಅಪೋಸ್ತಲರ ಕೃತ್ಯಗಳು 27:2 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 27:2 · ಕನ್ನಡ ಬೈಬಲ್

ನಾವು ಆಸ್ಯದ ತೀರಗಳ ಮಾರ್ಗವಾಗಿ ಪ್ರಯಾಣಮಾಡ ಬೇಕೆಂಬ ಉದ್ದೇಶದಿಂದ ಅದ್ರಮಿತ್ತಿಯ ಹಡಗನ್ನು ಹತ್ತಿ ಸಮುದ್ರ ಪ್ರಯಾಣವನ್ನು ಪ್ರಾರಂಭಿಸಿದೆವು ಆಗ ಥೆಸಲೊನೀಕದ ಮಕೆದೋನ್ಯದವನಾದ ಅರಿ ಸ್ತಾರ್ಕನು ನಮ್ಮೊಂದಿಗೆ ಇದ್ದನು.

Cross references

ಲೂಕ 8:22

ಇದಾದ ಮೇಲೆ ಒಂದಾನೊಂದು ದಿವಸ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ಅವರಿಗೆ--ನಾವು ಕೆರೆಯ ಆಚೇದಡಕ್ಕೆ ಹೋಗೋಣ ಎಂದು ಹೇಳಿದಾಗ ಅವರು ಹೊರಟರು.

ಅಪೋಸ್ತಲರ ಕೃತ್ಯಗಳು 2:9

ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ,

ಅಪೋಸ್ತಲರ ಕೃತ್ಯಗಳು 16:9

ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು.

ಅಪೋಸ್ತಲರ ಕೃತ್ಯಗಳು 16:17

ಈಕೆಯು ಪೌಲನನ್ನೂ ನಮ್ಮನ್ನೂ ಹಿಂಬಾಲಿಸಿ--ಇವರು ನಮಗೆ ರಕ್ಷಣೆಯ ಮಾರ್ಗವನ್ನು ತೋರಿಸುವ ಮಹೋನ್ನತ ನಾದ ದೇವರ ಸೇವಕರು ಎಂದು ಕೂಗಿ ಹೇಳುತ್ತಿದ್ದಳು.

ಅಪೋಸ್ತಲರ ಕೃತ್ಯಗಳು 17:1

ಮುಂದೆ ಅವರು ಅಂಫಿಪೊಲಿ ಅಪೊ ಲೊನ್ಯಗಳನ್ನು ದಾಟಿ ಥೆಸಲೊನೀಕಕ್ಕೆ ಬಂದರು; ಅಲ್ಲಿ ಯೆಹೂದ್ಯರದೊಂದು ಸಭಾಮಂದಿರ ವಿತ್ತು.

ಅಪೋಸ್ತಲರ ಕೃತ್ಯಗಳು 19:19

ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದ ವರಲ್ಲಿ ಅನೇಕರು ಸಹ ಬಂದು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವು ಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಎಂದು ತಿಳಿದು ಕೊಂಡರು.

ಅಪೋಸ್ತಲರ ಕೃತ್ಯಗಳು 19:29

ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

ಅಪೋಸ್ತಲರ ಕೃತ್ಯಗಳು 20:4

ಬೆರೋಯದ ವನಾದ ಸೋಪತ್ರನೂ ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ ಸೆಕುಂದನೂ ದೆರ್ಬೆಯ ಗಾಯನೂ ತಿಮೊಥೆಯನೂ ಆಸ್ಯದ ತುಖಿಕನೂ ತ್ರೊಫಿಮನೂ ಪೌಲನ ಜೊತೆಯಲ್ಲಿ ಆಸ್ಯಕ್ಕೆ ಹೋದರು.

ಅಪೋಸ್ತಲರ ಕೃತ್ಯಗಳು 20:15

ಅಲ್ಲಿಂದ ಹೊರಟು ಮರುದಿನ ಖೀಯೊಸ್‌ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿಗೆ ಬಂದು ತ್ರೋಗುಲ್ಯದಲ್ಲಿ ಇದ್ದು ಅದರ ಮರುದಿನ ನಾವು ಮಿಲೇತಕ್ಕೆ ಸೇರಿದೆವು.

ಅಪೋಸ್ತಲರ ಕೃತ್ಯಗಳು 21:1

ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್‌ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು.

ಅಪೋಸ್ತಲರ ಕೃತ್ಯಗಳು 21:5

ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.

ಅಪೋಸ್ತಲರ ಕೃತ್ಯಗಳು 28:2

ಅಲ್ಲಿಯ ಅನಾಗರಿಕ ಜನರು ನಮಗೆ ತೋರಿಸಿದ ದಯೆಯು ಅಪಾರವಾಗಿತ್ತು; ಆ ಸಮಯ ದಲ್ಲಿ ಮಳೆಯೂ ಚಳಿಯೂ ಇದ್ದದರಿಂದ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.

ಅಪೋಸ್ತಲರ ಕೃತ್ಯಗಳು 28:10

ಅವರು ಸಹ ನಮ್ಮನ್ನು ಬಹಳವಾಗಿ ಗೌರವಿಸಿ ಸನ್ಮಾನಿಸಿದರು; ನಾವು ಹೊರಟಾಗ ನಮಗೆ ಅವಶ್ಯ ವಾದವುಗಳನ್ನು ತಂದು ಹಡಗಿನಲ್ಲಿಟ್ಟರು.

ಅಪೋಸ್ತಲರ ಕೃತ್ಯಗಳು 28:12

ತರುವಾಯ ಸುರಕೂಸಿಗೆ ಸೇರಿ ನಾವು ಅಲ್ಲಿ ಮೂರು ದಿವಸಗಳು ಇದ್ದೆವು.

ಅಪೋಸ್ತಲರ ಕೃತ್ಯಗಳು 28:16

ನಾವು ರೋಮ್‌ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.

ಕೊಲೊಸ್ಸೆಯವರಿಗೆ 4:10

ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನ ಸಹೋದರಿಯ ಮಗನಾದ ಮಾರ್ಕನೂ (ಮಾರ್ಕನ) ವಿಷಯದಲ್ಲಿ ನೀವು ಅಪ್ಪಣೆ ಹೊಂದಿದ್ದೀರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಸೇರಿಸಿಕೊಳ್ಳಿರಿ.

ಫಿಲೇಮೋನ 1:24

ನನ್ನ ಜೊತೆಗೆಲಸದವರಾದ ಮಾರ್ಕ ಅರಿಸ್ತಾರ್ಕ ದೇಮಲೂ ಕರೂ ನಿನ್ನನ್ನು ವಂದಿಸುತ್ತಾರೆ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.

Interlinear

Choose Theme