ಆದರೆ ಯೆಹೂದ್ಯರನ್ನು ಸಂತೋಷ ಪಡಿಸುವದಕ್ಕಾಗಿ ಫೆಸ್ತನು ಪೌಲನಿಗೆ--ನೀನು ಯೆರೂಸಲೇಮಿಗೆ ಬಂದು ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಿಸಲ್ಪಡುವದಕ್ಕೆ ನಿನಗೆ ಇಷ್ಟ ವಿದೆಯೋ ಎಂದು ಕೇಳಿದನು.
Cross references
ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.
ಇದು ಯೆಹೂದ್ಯರಿಗೆ ಮೆಚ್ಚಿಗೆಯಾಗಿರುವದನ್ನು ಅವನು ನೋಡಿದ್ದರಿಂದ ಪೇತ್ರನನ್ನು ಹಿಡಿಯುವದಕ್ಕಾಗಿ ಮುಂಗೊಂಡನು. (ಆಗ ಅವು ಹುಳಿಯಿಲ್ಲದ ರೊಟ್ಟಿಯ ದಿವಸಗಳಾಗಿದ್ದವು).
ಎರಡು ವರುಷಗಳಾದ ಮೇಲೆ ಫೇಲಿಕ್ಸನ ಸ್ಥಳಕ್ಕೆ ಪೋರ್ಕಿಯ ಫೆಸ್ತನು ಬಂದನು. ಆಗ ಫೇಲಿಕ್ಸನು ಯೆಹೂದ್ಯರನ್ನು ಸಂತೋಷಪಡಿಸುವ ಮನಸ್ಸುಳ್ಳವನಾಗಿ ಪೌಲನನ್ನು ಬಂಧನದಲ್ಲಿಯೇ ಬಿಟ್ಟನು.
ಅವನನ್ನು ಕೊಲ್ಲುವದಕ್ಕಾಗಿ ದಾರಿಯಲ್ಲಿ ಹೊಂಚು ಹಾಕುತ್ತಾ ಅವನನ್ನು ಯೆರೂಸಲೇಮಿನಿಂದ ಕರೆಯಿಸ ಬೇಕೆಂದು ಅವನಿಗೆ ವಿರೋಧವಾಗಿ ಬೇಡಿಕೊಂಡರು.
ನಾನು ಅಂಥಾ ವಿಧವಾದ ಪ್ರಶ್ನೆಗಳ ವಿಷಯವಾಗಿ ಸಂದೇಹ ಪಟ್ಟದ್ದರಿಂದ ಅವನು ಯೆರೂಸಲೇಮಿಗೆ ಬಂದು ಇವುಗಳ ವಿಷಯವಾಗಿ ವಿಚಾರಿಸಲ್ಪಡುವದು ತನಗೆ ಇಷ್ಟವಿದೆಯೋ ಎಂದು ನಾನು ಕೇಳಿದೆನು.