ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ
Cross references
ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ.
ಅನೇಕ ದಿವಸಗಳು ಹೋದಮೇಲೆ ಯೆಹೂ ದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿ ಕೊಂಡರು.
ಅನ್ಯಜನರೂ ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳೊಂದಿಗೆ ಅಪೊಸ್ತಲರನ್ನು ಅವಮಾನಪಡಿಸುವದಕ್ಕೂ ಕಲ್ಲೆಸೆದು ಕೊಲ್ಲುವದಕ್ಕೂ ಪ್ರವರ್ತಿಸಿದಾಗ
ನಾನು ಬಹು ನಮ್ರತೆಯಿಂದಲೂ ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೆನು. ಇದರಲ್ಲಿ ಯೆಹೂದ್ಯರು ಹೊಂಚುಹಾಕಿದ್ದರಿಂದ ಸಂಕಷ್ಟಗಳು ಸಂಭವಿಸಿದವು.
ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು.
ಅವನನ್ನು ಕೊಲ್ಲುವದಕ್ಕಾಗಿ ದಾರಿಯಲ್ಲಿ ಹೊಂಚು ಹಾಕುತ್ತಾ ಅವನನ್ನು ಯೆರೂಸಲೇಮಿನಿಂದ ಕರೆಯಿಸ ಬೇಕೆಂದು ಅವನಿಗೆ ವಿರೋಧವಾಗಿ ಬೇಡಿಕೊಂಡರು.
ಶರೀರ ಸಂಬಂಧ ವಾಗಿ ನನ್ನ ಸ್ವಜನರಾಗಿರುವ ನನ್ನ ಸಹೋದರರಿಗೊಸ್ಕರ ನಾನೇ ಕ್ರಿಸ್ತನಿಂದ ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.
ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.