ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು.
Cross references
ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನರು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾರೆ.
ಅದಕ್ಕೆ ಶತಾಧಿಪತಿಯು ಪ್ರತ್ಯುತ್ತರವಾಗಿ--ಕರ್ತನೇ, ನೀನು ನನ್ನ ಮನೆ ಯೊಳಗೆ ಬರುವದಕ್ಕೆ ನಾನು ಯೋಗ್ಯನಲ್ಲ; ಆದರೆ ನೀನು ಒಂದು ಮಾತು ಮಾತ್ರ ಹೇಳು, ಆಗ ನನ್ನ ಸೇವಕನು ಸ್ವಸ್ಥನಾಗುವನು.
ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ.
ಆಗ ಶತಾಧಿಪತಿಯು ಅದನ್ನು ಕೇಳಿ ಅಲ್ಲಿಂದ ಹೋಗಿ ಮುಖ್ಯ ನಾಯಕನಿಗೆ--ನೀನು ಮಾಡುವದರಲ್ಲಿ ಎಚ್ಚರಿಕೆಯಾಗಿರು; ಈ ಮನುಷ್ಯನು ರೋಮ್‌ನವನು ಎಂದು ಹೇಳಿದನು.
ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ,