ಅಪೋಸ್ತಲರ ಕೃತ್ಯಗಳು 21:25 · ಕನ್ನಡ ಬೈಬಲ್
ನಂಬಿರುವ ಅನ್ಯಜನರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವೆಂದು ಹೇಳಿದರು.
Cross references
ಅಪೋಸ್ತಲರ ಕೃತ್ಯಗಳು 15:19
ಹೀಗಿರಲಾಗಿ ಅನ್ಯಜನರಿಂದ ದೇವರ ಕಡೆಗೆ ತಿರುಗಿಕೊಂಡವರನ್ನು ನಾವು ತೊಂದರೆಪಡಿ ಸಬಾರದೆಂಬದು ನನ್ನ ಅಭಿಪ್ರಾಯವಾಗಿದೆ.
ಅಪೋಸ್ತಲರ ಕೃತ್ಯಗಳು 15:29
ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.