Home Bibles ಅಪೋಸ್ತಲರ ಕೃತ್ಯಗಳು 21:18 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 21:18 · ಕನ್ನಡ ಬೈಬಲ್

ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು.

Cross references

ಮತ್ತಾಯ 10:2

ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ ಮತ್ತು ಅವನ ಸಹೋದರನಾದ ಯೋಹಾನ,

ಅಪೋಸ್ತಲರ ಕೃತ್ಯಗಳು 11:30

ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.

ಅಪೋಸ್ತಲರ ಕೃತ್ಯಗಳು 12:17

ಅವನು ಸುಮ್ಮನಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರ ರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟು ಹೋದನು.

ಅಪೋಸ್ತಲರ ಕೃತ್ಯಗಳು 15:2

ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.

ಅಪೋಸ್ತಲರ ಕೃತ್ಯಗಳು 15:6

ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ

ಅಪೋಸ್ತಲರ ಕೃತ್ಯಗಳು 15:13

ಅವರು ಮೌನವಾಗಿದ್ದಾಗ ಯಾಕೋ ಬನು ಹೇಳಿದ್ದೇನಂದರೆ--ಜನರೇ, ಸಹೋದರರೇ, ನಾನು ಹೇಳುವದನ್ನು ಕೇಳಿರಿ;

ಅಪೋಸ್ತಲರ ಕೃತ್ಯಗಳು 15:23

ಅವರು ಬರೆದುಕೊಟ್ಟದ್ದು ಈ ರೀತಿ ಯಲ್ಲಿತ್ತು; ಅಪೊಸ್ತಲರೂ ಹಿರಿಯರೂ ಸಹೋದರರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೆ ಮಾಡುವ ವಂದನೆ;

ಅಪೋಸ್ತಲರ ಕೃತ್ಯಗಳು 20:17

ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರೆಸಿದನು. ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇ ನಂದರೆ--

ಗಲಾತ್ಯದವರಿಗೆ 1:19

ಆದರೆ ಕರ್ತನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.

ಗಲಾತ್ಯದವರಿಗೆ 2:9

ಸ್ತಂಭಗಳೆಂದು ಕಾಣಿಸಿ ಕೊಂಡಿರುವ ಯಾಕೋಬ ಕೇಫ ಯೋಹಾನರು ನನಗೆ ದಯಪಾಲಿಸಿರುವ ಕೃಪೆಯನ್ನು ತಿಳಿದುಕೊಂಡು ಅನ್ಯೋ ನ್ಯತೆಯನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬ ನಿಗೂ ಬಲಗೈಕೊಟ್ಟು --ತಾವು ಸುನ್ನತಿಯವರ ಬಳಿಗೂ ನಾವು ಅನ್ಯಜನರ ಬಳಿಗೂ ಹೋಗುವದಕ್ಕೆ ಹೇಳಿ ದರು.

ಯಾಕೋಬ 1:1

ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬ ನು ಅನ್ಯದೇಶಗಳಲ್ಲಿ ಚದರಿರುವ (ಇಸ್ರಾಯೇಲ್‌) ಹನ್ನೆರಡು ಗೋತ್ರದವರಿಗೆ ವಂದನೆ.

Interlinear

Choose Theme