ತನ್ನ ಮುಖವನ್ನು ಅವರು ಇನ್ನು ನೋಡುವದಿಲ್ಲವೆಂದು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ವ್ಯಥೆಪಟ್ಟರು. ತರುವಾಯ ಅವರು ಅವನನ್ನು ಹಡಗಿನ ವರೆಗೆ ಸಾಗ ಕಳುಹಿಸಿದರು.
Cross references
ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.
ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು.
ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
ಆಗ ಕೈಸರೈಯದ ಶಿಷ್ಯರಲ್ಲಿ ಸಹ ಕೆಲವರು ನಮ್ಮೊಂದಿಗೆ ಬಂದು ನಾವು ಕುಪ್ರದ ಮ್ನಾಸೋನನೆಂಬ ಪ್ರಾಯ ಹೋದ ಒಬ್ಬ ಶಿಷ್ಯನ ಕೂಡ ಇಳುಕೊಳ್ಳುವಂತೆ ತಮ್ಮೊಂದಿಗೆ ಅವನನ್ನು ಕರಕೊಂಡು ಬಂದರು.
ಆದದರಿಂದ ಯಾರೂ ಅವನನ್ನು ಹೀನೈಸಬಾರದು; ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನ ದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ನಾನು ಎದುರು ನೋಡುತ್ತೇನೆ.