Home Bibles ಅಪೋಸ್ತಲರ ಕೃತ್ಯಗಳು 2:47 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 2:47 · ಕನ್ನಡ ಬೈಬಲ್

ಇದಲ್ಲದೆ ಅವರು ದೇವರನ್ನು ಕೊಂಡಾಡುವವರಾಗಿಯೂ ಜನ ರೆಲ್ಲರ ದಯೆಯನ್ನು ಹೊಂದುವವರಾಗಿಯೂ ಇದ್ದರು. ಪ್ರತಿ ದಿನ ರಕ್ಷಣೆ ಹೊಂದುತ್ತಿದ್ದವರನ್ನು ಕರ್ತನು ಸಭೆಗೆ ಸೇರಿಸುತ್ತಿದ್ದನು.

Cross references

ಲೂಕ 2:52

ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.

ಲೂಕ 19:48

ಆದರೆ ಅವರು ಏನು ಮಾಡಬೇಕೆಂಬದನ್ನು ಕಂಡುಕೊಳ್ಳದೆ ಹೋದರು; ಯಾಕಂದರೆ ಜನರೆಲ್ಲರೂ ಆತನು ಹೇಳುವದನು ಬಹಳ ಲಕ್ಷ್ಯಕೊಟ್ಟು ಆತನ ಉಪದೇಶ ವನ್ನು ಕೇಳುತ್ತಿದ್ದರು.

ಅಪೋಸ್ತಲರ ಕೃತ್ಯಗಳು 2:39

ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 2:41

ಆಗ ಅವನ ಮಾತನ್ನು ಸಂತೋಷವಾಗಿ ಅಂಗೀಕರಿಸಿದವರು ಬಾಪ್ತಿಸ್ಮ ಮಾಡಿಸಿಕೊಂಡರು. ಅದೇ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಸಲ್ಪಟ್ಟರು.

ಅಪೋಸ್ತಲರ ಕೃತ್ಯಗಳು 4:21

ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.

ಅಪೋಸ್ತಲರ ಕೃತ್ಯಗಳು 4:33

ಇದಲ್ಲದೆ ಕರ್ತನಾದ ಯೇಸುವಿನ ಪುನ ರುತ್ಥಾನದ ವಿಷಯವಾಗಿ ಅಪೊಸ್ತಲರು ಬಹಳ ಬಲ ವಾಗಿ ಸಾಕ್ಷಿಕೊಟ್ಟರು; ದೊಡ್ಡ ಕೃಪೆಯು ಅವರೆಲ್ಲರ ಮೇಲೆ ಇತ್ತು.

ಅಪೋಸ್ತಲರ ಕೃತ್ಯಗಳು 5:13

ಮಿಕ್ಕಾದ ವರಲ್ಲಿ ಒಬ್ಬರಿಗೂ ಅವರ ಜೊತೆ ಸೇರುವದಕ್ಕೆ ಧೈರ್ಯ ವಿರಲಿಲ್ಲ; ಆದರೂ ಜನರು ಅವರನ್ನು ಹೊಗಳುತ್ತಿದ್ದರು.

ಅಪೋಸ್ತಲರ ಕೃತ್ಯಗಳು 11:24

ಅವನು ಒಳ್ಳೆಯವನಾಗಿದ್ದು ಪವಿತ್ರಾತ್ಮನಿಂದಲೂ ನಂಬಿಕೆಯಿಂದಲೂ ತುಂಬಿದವನಾಗಿದ್ದನು; ಬಹು ಮಂದಿ ಕರ್ತನನ್ನು ಸೇರಿಕೊಂಡರು.

ಅಪೋಸ್ತಲರ ಕೃತ್ಯಗಳು 13:48

ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು ಕರ್ತನ ವಾಕ್ಯವನ್ನು ಮಹಿಮೆ ಪಡಿಸಿದರು. ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು.

ಅಪೋಸ್ತಲರ ಕೃತ್ಯಗಳು 16:5

ಹೀಗೆ ಸಭೆಗಳು ವಿಶ್ವಾಸದಲ್ಲಿ ಸ್ಥಿರಗೊಂಡು ಸಂಖ್ಯೆಯಲ್ಲಿ ದಿನಾಲು ಹೆಚ್ಚುತ್ತಿದ್ದವು.

ರೋಮಾಪುರದವರಿಗೆ 8:30

ಇದಲ್ಲದೆ ಯಾರನ್ನು ಮೊದಲು ನೇಮಿಸಿ ದನೋ ಅವರನ್ನು ಕರೆದನು; ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು; ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮೆಪಡಿಸಿದನು.

ರೋಮಾಪುರದವರಿಗೆ 9:27

ಯೆಶಾಯನು ಸಹ ಇಸ್ರಾಯೇಲ್ಯರ ವಿಷಯವಾಗಿ--ಇಸ್ರಾಯೇಲ್ಯರ ಮಕ್ಕಳ ಸಂಖ್ಯೆಯು ಸಮುದ್ರದ ಮರಳಿನೋಪಾದಿಯಲ್ಲಿದ್ದರೂ ಒಂದು ಅಂಶ ಮಾತ್ರ ರಕ್ಷಣೆ ಹೊಂದುವದು ಎಂದು ಕೂಗಿ ಹೇಳುತ್ತಾನೆ.

ರೋಮಾಪುರದವರಿಗೆ 11:5

ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ.

ರೋಮಾಪುರದವರಿಗೆ 14:18

ಕ್ರಿಸ್ತನ ಸೇವೆಯನ್ನು ಮಾಡುವವನು ಈ ವಿಷಯಗಳಲ್ಲಿ ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೆ.

1 ಕೊರಿಂಥದವರಿಗೆ 1:18

ನಾಶವಾಗುವವರಿಗೆ ಶಿಲುಬೆಯ ವಿಷಯವಾದ ಸಾರೋಣವು ಹುಚ್ಚುತನವಾಗಿದೆ; ರಕ್ಷಣೆ ಹೊಂದಿದ ನಮಗಾದರೋ ಅದು ದೇವರ ಶಕ್ತಿಯಾಗಿದೆ.

ತೀತ 3:4

ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ

Interlinear

Choose Theme