ಅಪೋಸ್ತಲರ ಕೃತ್ಯಗಳು 19:37 · ಕನ್ನಡ ಬೈಬಲ್
ಯಾಕಂದರೆ ನೀವು ತಂದಿರುವ ಈ ಮನುಷ್ಯರು ದೇವಸ್ಥಾನಗಳನ್ನು ದೋಚಿಕೊಳ್ಳುವವರೂ ಅಲ್ಲ, ನಿಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.
Cross references
ಅಪೋಸ್ತಲರ ಕೃತ್ಯಗಳು 25:8
ಆಗ ಪೌಲನು--ಯೆಹೂದ್ಯರ ನ್ಯಾಯಪ್ರಮಾಣಕ್ಕೆ ವಿರೋಧವಾಗಿಯಾಗಲೀ ಈ ದೇವಾಲಯಕ್ಕೆ ವಿರೋಧವಾಗಿಯಾಗಲೀ ಮಾತ್ರ ವಲ್ಲದೆ ಕೈಸರನಿಗೆ ವಿರೋಧವಾಗಿಯಾಗಲೀ ನಾನು ಯಾವ ತಪ್ಪನ್ನೂ ಮಾಡಲಿಲ್ಲ ಎಂದು ಪ್ರತ್ಯುತ್ತರವಾಗಿ ಹೇಳಿದನು.
ರೋಮಾಪುರದವರಿಗೆ 2:22
ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ?
1 ಕೊರಿಂಥದವರಿಗೆ 10:32
ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
2 ಕೊರಿಂಥದವರಿಗೆ 6:3
ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;