Home Bibles ಅಪೋಸ್ತಲರ ಕೃತ್ಯಗಳು 19:34 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 19:34 · ಕನ್ನಡ ಬೈಬಲ್

ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.

Cross references

1 ಅರಸುಗಳು 18:26

ಅವರು ತಮಗೆ ಕೊಡಲ್ಪಟ್ಟ ಹೋರಿ ಯನ್ನು ತೆಗೆದುಕೊಂಡು ಸಿದ್ಧಮಾಡಿ--ಓ ಬಾಳನೇ, ನಮ್ಮನ್ನು ಕೇಳೆಂದು ಉದಯದಿಂದ ಮಧ್ಯಾಹ್ನದ ವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ ಪ್ರತ್ಯುತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು.

ಮತ್ತಾಯ 6:7

ಆದರೆ ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ ಯಾಕಂದರೆ ತಾವು ಬಹಳವಾಗಿ ಮಾತನಾಡು ವದರಿಂದ ತಮ್ಮ ಪ್ರಾರ್ಥನೆಯು ಕೇಳಲ್ಪಡುವದೆಂದು ಅವರು ಯೋಚಿಸುತ್ತಾರೆ.

ಅಪೋಸ್ತಲರ ಕೃತ್ಯಗಳು 16:20

ಅವರನ್ನು ನ್ಯಾಯಾಧಿಪತಿಗಳ ಬಳಿಗೆ ಕರಕೊಂಡು ಹೋಗಿ--ಯೆಹೂದ್ಯರಾದ ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕಳವಳ ಪಡಿಸುತ್ತಾರೆ.

ಅಪೋಸ್ತಲರ ಕೃತ್ಯಗಳು 19:26

ಆದರೆ ಕೈಯಿಂದ ಮಾಡಿದವುಗಳು ದೇವರುಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯ ಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿ ಬಿಟ್ಟಿದ್ದಾನೆಂಬದನ್ನು ನೀವು ನೋಡುತ್ತೀರಿ

ಅಪೋಸ್ತಲರ ಕೃತ್ಯಗಳು 19:28

ಅವರು ಈ ಮಾತುಗಳನ್ನು ಕೇಳಿ ರೌದ್ರವುಳ್ಳವರಾಗಿ-- ಎಫೆಸದವರ ಡಯಾನಿಯು ದೊಡ್ಡವಳು ಎಂದು ಕೂಗುತ್ತಾ ಹೇಳಿದರು.

ರೋಮಾಪುರದವರಿಗೆ 2:22

ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ?

ಪ್ರಕಟನೆ 13:4

ಘಟ ಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವ ನಾದ್ದರಿಂದ ಅವರು ಆ ಘಟಸರ್ಪನನ್ನು ಆರಾಧನೆ ಮಾಡುವವರಾದರು. ಇದಲ್ಲದೆ ಆ ಮೃಗವನ್ನು ಆರಾ ಧಿಸಿ--ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು ಅಂದರು.

Interlinear

Choose Theme