Home Bibles ಅಪೋಸ್ತಲರ ಕೃತ್ಯಗಳು 17:27 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 17:27 · ಕನ್ನಡ ಬೈಬಲ್

ಆತನು ನಮ್ಮಲ್ಲಿ ಒಬ್ಬನಿಗೂ ದೂರ ವಾದವನಲ್ಲದಿದ್ದರೂ ಅವರು ಕರ್ತನನ್ನು ತಡವಾಡಿ ಕಂಡುಕೊಂಡಾರೇನೋ ಎಂದು ಮೊದಲೇ ನೇಮಕ ವಾದ ಕಾಲಗಳನ್ನೂ ಅವರ ನಿವಾಸದ ಮೇರೆಗಳನ್ನೂ ನಿಶ್ಚಯಿಸಿದನು.

Cross references

ದ್ವಿತೀಯೋಪದೇಶಕಾಂಡ 4:7

ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?

1 ಅರಸುಗಳು 8:27

ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?

ಕೀರ್ತನೆಗಳು 19:1

ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.

ಕೀರ್ತನೆಗಳು 139:1

ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ;

ಅಪೋಸ್ತಲರ ಕೃತ್ಯಗಳು 14:17

ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು.

ಅಪೋಸ್ತಲರ ಕೃತ್ಯಗಳು 15:17

ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.

ರೋಮಾಪುರದವರಿಗೆ 1:20

ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ.

ರೋಮಾಪುರದವರಿಗೆ 2:4

ಇಲ್ಲವೆ ದೇವರ ದಯೆಯು ನಿನ್ನನ್ನು ಮಾನಸಾಂತರಕ್ಕೆ ನಡಿಸುತ್ತದೆಯೆಂದು ನೀನು ತಿಳಿಯದೆ ಆತನ ಅಪಾರವಾದ ದಯೆ ಸಹನೆ ದೀರ್ಘ ಶಾಂತಿ ಇವುಗಳನ್ನು ಅಸಡ್ಡೆಮಾಡುತ್ತೀಯೋ?

Interlinear

Choose Theme