Home Bibles ಅಪೋಸ್ತಲರ ಕೃತ್ಯಗಳು 15:26 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 15:26 · ಕನ್ನಡ ಬೈಬಲ್

ನಮ್ಮ ಪ್ರಿಯ ಬಾರ್ನಬ ಸೌಲರ ಜೊತೆಯಲ್ಲಿ ನಾವು ಆರಿಸಿಕೊಂಡವರನ್ನು ನಿಮ್ಮ ಬಳಿಗೆ ಕಳುಹಿ ಸುವದು ಯುಕ್ತವೆಂದು ನಮಗೆ ತೋಚಿತು.

Cross references

ನ್ಯಾಯಾಧಿಪತಿಗಳು 5:18

ಜೆಬುಲೂನನೂ ನಫ್ತಾ ಲಿಯೂ ಹೊಲದ ಎತ್ತರವಾದ ಸ್ಥಳಗಳಲ್ಲಿ ಮರಣಕ್ಕೂ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಇಟ್ಟ ಜನರಾ ಗಿದ್ದರು.

ಅಪೋಸ್ತಲರ ಕೃತ್ಯಗಳು 9:23

ಅನೇಕ ದಿವಸಗಳು ಹೋದಮೇಲೆ ಯೆಹೂ ದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿ ಕೊಂಡರು.

ಅಪೋಸ್ತಲರ ಕೃತ್ಯಗಳು 13:50

ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.

ಅಪೋಸ್ತಲರ ಕೃತ್ಯಗಳು 14:19

ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು.

1 ಕೊರಿಂಥದವರಿಗೆ 15:30

ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿ ದ್ದೇವೆ?

2 ಕೊರಿಂಥದವರಿಗೆ 11:23

ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು.

ಫಿಲಿಪ್ಪಿಯವರಿಗೆ 2:29

ಆದದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿ ಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯ ಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವಹಾಗಿದ್ದನು.

Interlinear

Choose Theme