Home Bibles ಅಪೋಸ್ತಲರ ಕೃತ್ಯಗಳು 1:4 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 1:4 · ಕನ್ನಡ ಬೈಬಲ್

ಆತನು ಅವರೊಂದಿಗೆ ಕೂಡಿಕೊಂಡಿದ್ದಾಗ--ನೀವು ಯೆರೂಸಲೇಮಿನಿಂದ ಹೊರಟುಹೋಗದೆ ನನ್ನಿಂದ ಕೇಳಿದ ತಂದೆಯ ವಾಗ್ದಾನಕೋಸ್ಕರ ಕಾಯ ಬೇಕೆಂದು ಅವರಿಗೆ ಅಪ್ಪಣೆಕೊಟ್ಟನು.

Cross references

ಅಂಕೆಗಳ ಪುಸ್ತಕ 9:22

ಇಲ್ಲವೆ ಆ ಮೇಘವು ಎರಡು ದಿವಸಗಳಾದರೂ ಒಂದು ತಿಂಗಳಾದರೂ ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾ ಯೇಲ್‌ ಮಕ್ಕಳು ಪ್ರಯಾಣಮಾಡದೆ ಇಳುಕೊಂಡಿ ದ್ದರು. ಅದು ಮೇಲಕ್ಕೆತ್ತಲ್ಪಟ್ಟಾಗಲೇ ಅವರು ಪ್ರಯಾಣ ಮಾಡುತ್ತಿದ್ದರು.ಕರ್ತನ ಆಜ್ಞೆಯ ಪ್ರಕಾರ ಅವರು ಇಳುಕೊಳ್ಳುತ್ತಾ ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಕರ್ತನು ಆಜ್ಞಾಪಿಸಿ ದಂತೆ ಕರ್ತನ ಅಪ್ಪಣೆಯನ್ನು ಕಾಪಾಡುತ್ತಿದ್ದರು.

ಮತ್ತಾಯ 10:20

ಯಾಕಂದರೆ ಮಾತನಾಡು ವವರು ನೀವಲ್ಲ, ಆದರೆ ನಿಮ್ಮ ತಂದೆಯ ಆತ್ಮನು ನಿಮ್ಮೊಳಗೆ ಮಾತನಾಡುತ್ತಾನೆ.

ಲೂಕ 11:13

ಹಾಗಾದರೆ ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೇದಾನಗಳನ್ನು ಕೊಡುವದು ಹೇಗೆಂಬದನ್ನು ತಿಳಿ ದವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತನ್ನನ್ನು ಬೇಡಿಕೊಳ್ಳುವವರಿಗೆ ಪವಿ ತ್ರಾತ್ಮನನ್ನು ದಯಪಾಲಿಸುವನಲ್ಲವೇ?

ಲೂಕ 12:12

ಯಾಕಂದರೆ ಅದೇ ಗಳಿಗೆಯಲ್ಲಿ ನೀವು ಹೇಳಬೇಕಾದದ್ದನ್ನು ಪರಿಶುದ್ಧಾತ್ಮನು ನಿಮಗೆ ಕಲಿಸುವನು ಅಂದನು.

ಲೂಕ 24:41

ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರು ವಾಗ ಆತನು ಅವರಿಗೆ--ನಿಮ್ಮಲ್ಲಿ ಆಹಾರವೇನಾದರೂ ಇದೆಯೋ ಎಂದು ಕೇಳಿದನು.

ಲೂಕ 24:49

ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮ್ಮ ಮೇಲೆ ಕಳುಹಿಸುವೆನು; ಆದರೆ ನೀವು ಮೇಲಣ ಶಕ್ತಿಯನ್ನು ಹೊಂದುವ ವರೆಗೆ ಯೆರೂಸಲೇಮ್‌ ಪಟ್ಟಣದಲ್ಲಿಯೇ ಕಾದುಕೊಂಡಿರ್ರಿ ಅಂದನು.

ಯೋಹಾನ 7:39

(ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)

ಯೋಹಾನ 14:16

ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.

ಯೋಹಾನ 14:26

ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.

ಯೋಹಾನ 15:26

ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.

ಯೋಹಾನ 16:7

ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು.

ಯೋಹಾನ 20:22

ಆತನು ಇದನ್ನು ಹೇಳಿ ಅವರ ಮೇಲೆ ಊದಿ ಅವರಿಗೆ--ನೀವು ಪರಿಶುದ್ಧಾತ್ಮನನ್ನು ಹೊಂದಿಕೊಳ್ಳಿರಿ;

ಅಪೋಸ್ತಲರ ಕೃತ್ಯಗಳು 2:33

ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ.

ಅಪೋಸ್ತಲರ ಕೃತ್ಯಗಳು 10:41

ದೇವರು ಎಲ್ಲರಿಗೆ ತೋರ್ಪಡಿ ಸದೆ ಆತನು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾಗಿರುವ ನಮಗೆ ಆತನನ್ನು ತೋರ್ಪಡಿಸಿ ದನು. ಆತನು ಸತ್ತವರೊಳಗಿಂದ ಎದ್ದು ಬಂದ ಮೇಲೆ ನಾವು ಆತನ ಸಂಗಡ ತಿಂದು ಕುಡಿದೆವು.

Interlinear

Choose Theme