Home Bibles 3 ಯೋಹಾನ 1:5 · ಕನ್ನಡ ಬೈಬಲ್
3 ಯೋಹಾನ 1:5 · ಕನ್ನಡ ಬೈಬಲ್

ಪ್ರಿಯನೇ, ಸಹೋದರರಿಗೂ ಪರಿಚಯವಿಲ್ಲದವ ರಿಗೂ ನೀನು ಮಾಡುವದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.

Cross references

ಮತ್ತಾಯ 24:45

ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?

ಮತ್ತಾಯ 25:16

ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.

ಲೂಕ 12:42

ಕರ್ತನು--ಹಾಗಾದರೆ ತಕ್ಕಕಾಲದಲ್ಲಿ ಅವರ ಪಾಲಿನ ಆಹಾರವನ್ನು ಕೊಡುವದಕ್ಕಾಗಿ ಒಡೆಯನು ತನ್ನ ಮನೆಯಮೇಲೆ ನೇಮಿಸುವ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೇವಾರ್ತೆಯವನು ಯಾರು?

ಲೂಕ 16:10

ಯಾವನು ಸ್ವಲ್ಪವಾದದ್ದರಲ್ಲಿ ನಂಬಿಗಸ್ತ ನಾಗಿರುವನೋ ಅವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿದ್ದಾನೆ; ಯಾವನು ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವನೋ ಅವನು ಬಹಳವಾದದ್ದ ರಲ್ಲಿಯೂ ಅನ್ಯಾಯಗಾರನಾಗಿದ್ದಾನೆ.

2 ಕೊರಿಂಥದವರಿಗೆ 4:1

ಆದದರಿಂದ ನಾವು ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಡುವದಿಲ್ಲ.

ಗಲಾತ್ಯದವರಿಗೆ 6:10

ಆದದ ರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ವಿಶ್ವಾಸದ ಮನೆತನ ದವರಿಗೆ ಮಾಡೋಣ.

ಕೊಲೊಸ್ಸೆಯವರಿಗೆ 3:17

ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.

1 ಪೇತ್ರ 4:10

ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.

Interlinear

Choose Theme