Home Bibles ☰ Books 2 ತಿಮೋಥೆಯ 4:14 · ಕನ್ನಡ ಬೈಬಲ್
2 ತಿಮೋಥೆಯ 4:14 · ಕನ್ನಡ ಬೈಬಲ್

ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು.

Cross references

1 ಸಮುವೇಲ 24:12

ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ.

2 ಸಮುವೇಲ 3:39

ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.

ಕೀರ್ತನೆಗಳು 28:4

ಅವರ ಕೃತ್ಯಗಳ ಪ್ರಕಾರ ವಾಗಿಯೂ ಕೆಟ್ಟತನದ ಕ್ರಿಯೆಗಳ ಪ್ರಕಾರವಾಗಿಯೂ ಅವರಿಗೆ ಕೊಡು; ಅವರ ಕೈಗಳ ಕೆಲಸದ ಪ್ರಕಾರವಾಗಿ ಅವರಿಗೆ ಕೊಡು. ಅವರ ಪ್ರತೀಕಾರವನ್ನು ಅವರಿಗೆ ತಿರುಗಮಾಡು.

ಕೀರ್ತನೆಗಳು 62:12

ಓ ಕರ್ತನೇ, ನಿನ್ನಲ್ಲಿ ಕರುಣೆಯುಂಟು; ನೀನು ಪ್ರತಿ ಮನುಷ್ಯನಿಗೆ ಅವನ ಕೆಲಸದ ಪ್ರಕಾರ ಪ್ರತಿಫಲ ಕೊಡುತ್ತೀ.

ಕೀರ್ತನೆಗಳು 109:5

ನನ್ನ ಮೇಲಿಗೆ ಬದಲಾಗಿ ಕೇಡನ್ನೂ ಪ್ರೀತಿಗೆ ಬದಲಾಗಿ ಹಗೆಯನ್ನೂ ನನಗೆ ವಿರೋಧ ವಾಗಿ ಮಾಡಿದ್ದಾರೆ.

ಕೀರ್ತನೆಗಳು 109:20

ಇದು ನನ್ನ ಪ್ರಾಣಕ್ಕೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಕರ್ತನಿಂದ ಪ್ರತಿಫಲವಾಗಿರಲಿ.

ಯೆರೆಮಿಯ 15:15

ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮಕ್ಕಳನ್ನು ಉತ್ತರ ದೇಶ ದೊಳಗಿಂದಲೂ ನಾನು ಅವರನ್ನು ಅಟ್ಟಿ ಬಿಟ್ಟಿದ್ದ ಸಮಸ್ತ ದೇಶಗಳೊಳಗಿಂದಲೂ ಬರಮಾಡಿ ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು ಎಂದು ಹೇಳುವ ದಿನಗಳು ಬರುವವು.

ವಿಲಾಪಗಳು 3:64

ಓ ಕರ್ತನೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡು.

ಅಪೋಸ್ತಲರ ಕೃತ್ಯಗಳು 19:33

ಅವರು ಅಲೆಕ್ಸಾಂದ್ರನನ್ನು ಸಮೂಹ ದೊಳಗಿಂದ ಹೊರಗೆ ತಂದಾಗ ಯೆಹೂದ್ಯರು ಅವನನ್ನು ಮುಂದೆ ತಂದರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಜನರಿಗೆ ಪ್ರತಿವಾದ ಮಾಡ ಬೇಕೆಂದಿದ್ದನು.

ರೋಮಾಪುರದವರಿಗೆ 12:19

ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.

2 ತೆಸಲೋನಿಕದವರಿಗೆ 1:6

ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟಪಡಿಸುವದೂ

1 ತಿಮೋಥೆಯ 1:20

ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

Interlinear

Choose Theme