ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
Cross references
ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
ಅದಕ್ಕೆ ವಿಾಕಾಯೆಹುವು ಹೇಳಿದ್ದೇನಂದರೆ--ಕರ್ತನ ವಾಕ್ಯ ವನ್ನು ಕೇಳು. ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರು ವದನ್ನೂ ನಾನು ಕಂಡೆನು.
ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು.
ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ.
ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
ನಾನು ಸಹ ಅವರ ಮೋಸಗಳನ್ನು ಆದುಕೊಂಡು ಅವರ ಭಯಗಳನ್ನು ಅವರ ಮೇಲೆ ಬರಮಾಡುವೆನು; ಯಾಕಂದರೆ ನಾನು ಕರೆಯಲು ಯಾರೂ ಉತ್ತರ ಕೊಡಲಿಲ್ಲ. ನಾನು ಮಾತನಾಡಲು ಅವರು ಕೇಳಲಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ನಾನು ಮೆಚ್ಚದ್ದನ್ನು ಆದುಕೊಂಡರು.
ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರವಿಾಯನ ಕುತ್ತಿಗೆ ಯಿಂದ ನೊಗವನ್ನು ತೆಗೆದು ಅದನ್ನು ಮುರಿದುಬಿಟ್ಟನು.
ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.
ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
ಯಾಕಂದರೆ ನನ್ನ ಹೆಸರಿನಲ್ಲಿ ಅನೇಕರು ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ--
ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
ಯಾಕಂದರೆ ನಮ್ಮ ಬೋಧನೆಯು ಮೋಸ ವಲ್ಲ, ಅಶುದ್ಧವಲ್ಲ, ವಂಚನೆಯಲ್ಲ;
ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ.