ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು.
Cross references
ಫಿಲಿಷ್ಟಿಯರು ತಗ್ಗಿಸಲ್ಪಟ್ಟು ಇಸ್ರಾ ಯೇಲಿನ ಮೇರೆಯಲ್ಲಿ ಬಾರದೆ ಇದ್ದರು. ಇದಲ್ಲದೆ ಸಮುವೇಲನು ಇದ್ದ ದಿವಸಗಳೆಲ್ಲಾ ಕರ್ತನ ಕೈ ಫಿಲಿಷ್ಟಿ ಯರಿಗೆ ವಿರೋಧವಾಗಿತ್ತು.
ಆದರೆ ಯೋವಾ ಬನೂ ಅಬಿಷೈಯೂ ಅಬ್ನೇರನನ್ನು ಹಿಂದಟ್ಟಿ ಸೂರ್ಯಅಸ್ತಮಿಸುವ ವರೆಗೆ ಗಿಬ್ಯೋನಿನ ಅರಣ್ಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದ ಮಟ್ಟಿಗೂ ಬಂದರು.
ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಲು ಅಭಿಷೇಕಮಾಡಿದ್ದಾರೆಂದು ಫಿಲಿಷ್ಟಿ ಯರು ಕೇಳಿದಾಗ ಅವರೆಲ್ಲರು ದಾವೀದನನ್ನು ಹುಡುಕು ವದಕ್ಕೆ ಬಂದರು. ಅದನ್ನು ದಾವೀದನು ಕೇಳಿ ಗಡಿ ಸ್ಥಳಕ್ಕೆ ಹೋದನು.
ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು.
ಫಿಲಿಷ್ಟಿಯರು ತಿರಿಗಿ ಇಸ್ರಾಯೇಲ್ಯರ ಮೇಲೆ ಯುದ್ಧಮಾಡಿದರು. ಆಗ ದಾವೀದನೂ ಅವನ ಸಂಗಡ ಇದ್ದ ಅವನ ಸೇವಕರೂ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿದರು; ಆದರೆ ದಾವೀದನು ದಣಿದು ಹೋದನು.
ಇದರ ತರುವಾಯ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ತಗ್ಗಿಸಿ ಗತ್‌ನ್ನೂ ಅದರ ಗ್ರಾಮಗಳನ್ನೂ ಫಿಲಿಷ್ಟಿಯರ ಕೈಯೊಳಗಿಂದ ತೆಗೆದುಕೊಂಡನು.
ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿದ್ದೀ; ಅದರ ಬಿರುಕುಗಳನ್ನು ಸರಿಮಾಡು; ಅದು ಕದಲು ತ್ತದೆ.