ನೀನು ನಿನ್ನ ದಾಸನನ್ನು ಬಲ್ಲೆ; ಕರ್ತನಾದ ದೇವರೇ, ನಿನ್ನ ವಾಕ್ಯದ ನಿಮಿತ್ತ ವಾಗಿಯೂ ನಿನ್ನ ಹೃದಯದ ಪ್ರಕಾರವಾಗಿಯೂ ನಿನ್ನ ದಾಸನಿಗೆ ತಿಳಿಯಮಾಡುವ ಹಾಗೆ ಈ ದೊಡ್ಡ ಕಾರ್ಯಗಳನ್ನೆಲ್ಲಾ ಮಾಡಿದಿ.
Cross references
ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
ನಿನ್ನ ನೀತಿಗೋಸ್ಕರವೂ ನಿನ್ನ ಹೃದಯದ ಯಥಾರ್ಥತೆ ಗೋಸ್ಕರವೂ ನೀನು ಅವರ ದೇಶವನ್ನು ಸ್ವತಂತ್ರಿಸಿ ಕೊಳ್ಳುವದಕ್ಕೆ ಬರುವದಿಲ್ಲ; ಆ ಜನಾಂಗಗಳ ಕೆಟ್ಟತನ ಕ್ಕೋಸ್ಕರವೂ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
ಇಗೋ, ನಾನು ಇಂದು ಭೂಲೋಕದವರೆಲ್ಲರ ಮಾರ್ಗವಾಗಿ ಹೋಗುತ್ತೇನೆ. ನಿಮ್ಮ ದೇವರಾದ ಕರ್ತನು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೇ ಮಾತುಗಳಲ್ಲಿ ಒಂದು ಮಾತಾದರೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ; ಅವು ಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
ನಿನ್ನ ಪರಿಶುದ್ಧ ಮಂದಿರದ ಕಡೆಗೆ ಅಡ್ಡ ಬಿದ್ದು ನಿನ್ನ ಪ್ರೀತಿ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ನಿನ್ನ ಹೆಸರನ್ನು ಕೊಂಡಾಡುವೆನು; ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀ.
ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
ತನ್ನ ಕರುಣೆಯ ಜ್ಞಾಪಕಾರ್ಥ ವಾಗಿ ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡಿದ್ದಾನೆ.
ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು
ಆ ಗಳಿಗೆಯಲ್ಲಿ ಯೇಸು ಆತ್ಮದಲ್ಲಿ ಉಲ್ಲಾಸ ಗೊಂಡು -- ಓ ತಂದೆಯೇ, ಪರಲೋಕ, ಭೂಲೋಕ ಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿ ಗಳಿಗೂ ಬುದ್ಧಿವಂತರಿಗೂ ಮರೆಮಾಡಿ ಕೂಸುಗಳಿಗೆ ಪ್ರಕಟಮಾಡಿರುವದರಿಂದ ನಿನ್ನನ್ನು ಕೊಂಡಾಡುತ್ತೇನೆ; ಹೌದು, ತಂದೆಯೇ, ಅದು ನಿನ್ನ ದೃ
ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
ದೇವರ ಚಿತ್ತಾನುಸಾರವಾಗಿ ಯೇಸು ಕ್ರಿಸ್ತನ ಅಪೊಸ್ತಲನಾಗುವದಕ್ಕೆ ಕರೆಯ ಲ್ಪಟ್ಟ ಪೌಲನೂ ನಮ್ಮ ಸಹೋದರನಾದ ಸೊಸ್ಥೆ ನನೂ
ಆತನು ತನ್ನಲ್ಲಿ ಉದ್ದೇಶಿಸಿದ ಪ್ರಕಾರ ಆನಂದಪೂರ್ವಕವಾದ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದನು.
ನಮ್ಮ ಕರ್ತನಾದ ಕ್ರಿಸ್ತ ಯೇಸು ವಿನಲ್ಲಿ ಆತನು ಸಂಕಲ್ಪಿಸಿದ ಶಾಶ್ವತವಾದ ಸಂಕಲ್ಪದಂತೆ ಇದಾಯಿತು.