Home Bibles 2 ಸಮುವೇಲ 5:21 · ಕನ್ನಡ ಬೈಬಲ್
2 ಸಮುವೇಲ 5:21 · ಕನ್ನಡ ಬೈಬಲ್

ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.

Cross references

ದ್ವಿತೀಯೋಪದೇಶಕಾಂಡ 7:5

ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು.

ದ್ವಿತೀಯೋಪದೇಶಕಾಂಡ 7:25

ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು; ಅವುಗಳ ಮೇಲಿರುವ ಬೆಳ್ಳಿ ಬಂಗಾರವನ್ನು ಆಶಿಸಿ ನೀನು ತಕ್ಕೊಳ್ಳಬಾರದು; ಅದು ನಿನಗೆ ಉರ್ಲಾ ದೀತು; ಅದು ನಿನ್ನ ದೇವರಾದ ಕರ್ತನಿಗೆ ಅಸಹ್ಯವೇ.ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.

1 ಸಮುವೇಲ 5:2

ಫಿಲಿಷ್ಟಿಯರು ದೇವರ ಮಂಜೂಷವನ್ನು ತಕ್ಕೊಂಡು ಬಂದು ದಾಗೋನನ ಮನೆಯಲ್ಲಿ ದಾಗೋನನ ಬಳಿಯಲ್ಲಿಟ್ಟರು.

1 ದಿನವೃತ್ತಾಂತ 14:11

ಹಾಗೆಯೇ ಅವರು ಬಾಳ್‌ಪೆರಾಚೀಮಿಗೆ ಬಂದ ಮೇಲೆ ದಾವೀದನು ಅಲ್ಲಿ ಅವರನ್ನು ಸಂಹರಿಸಿದನು. ಆಗ ದಾವೀದನು--ನೀರು ಕೊಚ್ಚಿಕೊಂಡು ಹೋಗುವ ಹಾಗೆ ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾನೆ ಅಂದನು. ಆದಕಾರಣ ಆ ಸ್ಥಳಕ್ಕೆ ಬಾಳ್‌ಪೆರಾಚೀಮು ಎಂದು ಹೆಸರಿಟ್ಟನು.

ಯೆಶಾಯ 37:19

ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು.

ಯೆಶಾಯ 46:1

ಬೇಲ್‌(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.

ಯೆಶಾಯ 46:2

ಒಟ್ಟಿಗೆ ಕುಗ್ಗಿ, ಬೊಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋದವು.

ಯೆರೆಮಿಯ 43:12

ಐಗುಪ್ತದೇಶಕ್ಕೆ ಹೋಗಿ ಅಲ್ಲಿ ತಂಗಬೇಕೆಂದು ತಮ್ಮ ಮುಖಗಳನ್ನು ತಿರುಗಿಸಿರುವ ಯೆಹೂದದಲ್ಲಿ ಉಳಿದಿರುವವರನ್ನು ತಕ್ಕೊಳ್ಳುತ್ತೇನೆ; ಅವರೆಲ್ಲರೂ ಕಡಿದು ಬಿಡಲ್ಪಟ್ಟ ಐಗುಪ್ತದೇಶದಲ್ಲಿ ಬೀಳುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಕಡಿದು ಬಿಡಲ್ಪಡು ವರು; ಚಿಕ್ಕವನು ಮೊದಲುಗೊಂಡು ದೊಡ್ಡವನ ವರೆಗೂ ಕತ್ತಿಯಿಂದಲೂ ಕ್ಷಾಮದಿಂದಲೂ ಸಾಯು ವರು. ಅವರು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವರು.

ಯೆರೆಮಿಯ 48:7

ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ?

ದಾನಿಯೇಲ 11:8

ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು.

Interlinear

Choose Theme