2 ಸಮುವೇಲ 3:19 · ಕನ್ನಡ ಬೈಬಲ್
ಇದಲ್ಲದೆ ಅಬ್ನೇರನು ಬೆನ್ಯಾವಿಾನ್ಯನವರ ಸಂಗಡ ಮಾತನಾಡಿದನು. ಅಬ್ನೇ ರನು ಇಸ್ರಾಯೇಲ್ಯರ ದೃಷ್ಟಿಗೂ ಬೆನ್ಯಾವಿಾನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೇದಾಗಿ ತೋರಿದ್ದ ನ್ನೆಲ್ಲಾ ದಾವೀದನಿಗೆ ತಿಳಿಸುವದಕ್ಕೆ ಹೆಬ್ರೋನಿಗೆ ಹೋದನು.
Cross references
1 ಸಮುವೇಲ 10:20
ಸಮುವೇಲನು ಇಸ್ರಾಯೇಲಿನ ಗೋತ್ರಗಳನ್ನೆಲ್ಲಾ ಸವಿಾಪಕ್ಕೆ ಬರ ಮಾಡಿದಾಗ ಬೆನ್ಯಾವಿಾನನ ಗೋತ್ರವು ಆರಿಸಲ್ಪಟ್ಟಿತು.
1 ದಿನವೃತ್ತಾಂತ 12:29
ಸೌಲನ ಸಹೋದರರಾಗಿರುವ ಬೆನ್ಯಾವಿಾನನ ಮಕ್ಕಳಲ್ಲಿ ಮೂರು ಸಾವಿರಮಂದಿ; ಇಂದಿನ ವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.
1 ದಿನವೃತ್ತಾಂತ 12:30
ಎಫ್ರಾಯಾಮನ ಮಕ್ಕಳಲ್ಲಿ ಇಪ್ಪತ್ತು ಸಾವಿರದ ಎಂಟುನೂರು ಮಂದಿ; ಬಲವುಳ್ಳ ಪರಾಕ್ರಮಶಾಲಿ ಗಳೂ ತಮ್ಮ ಪಿತೃಗಳ ಮನೆಯಲ್ಲಿ ಹೆಸರುಗೊಂಡ ವರಾಗಿದ್ದರು.
ಕೀರ್ತನೆಗಳು 68:27
ಅಲ್ಲಿ ಅವರನ್ನಾಳುವವರ ಕೂಡ ಚಿಕ್ಕ ಬೆನ್ಯಾ ವಿಾನನು ಅವರ ನಾಯಕರಾದ ಯೆಹೂದನ ಪ್ರಧಾ ನರೂ ಅವರ ಸಮೂಹವೂ ಜೆಬುಲೂನನ, ನಫ್ತಾ ಲಿಯ ಪ್ರಧಾನರೂ ಇದ್ದಾರೆ.