ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ.
Cross references
ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯಾರ್ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು.
ಲೇವಿಯರಾದ ಯೇಷೂವನೂ ಕದ್ಮೀಯೇಲನೂ ಬಾನೀಯೂ ಹಷ ಬ್ನೆಯೂ ಶೇರೇಬ್ಯನೂ ಹೋದೀಯನೂ ಶೆಬನ್ಯನೂ ಪೆತಹ್ಯನೂ ಜನರಿಗೆ ಹೇಳಿದ್ದೇನಂದರೆ--ನೀವು ಎದ್ದು ನಿಮ್ಮ ದೇವರಾಗಿರುವ ಕರ್ತನನ್ನು ಎಂದೆಂದಿಗೂ ಸ್ತುತಿಸಿರಿ ಅಂದನು. ಹೀಗೆ ಅವರು--ಸಕಲ ಸ್ತುತಿ ಸ್ತೋತ್ರಗಳಿಗಿಂತ ಉನ್ನತವಾದ ನಿನ್ನ ಘನವುಳ್ಳ ಹೆಸರಿಗೆ ಕೊಂಡಾಟವಾಗಲಿ.
ಸ್ತುತಿಸತಕ್ಕ ಕರ್ತನಿಗೆ ನಾನು ಮೊರೆಯಿಡುತ್ತೇನೆ; ಹೀಗೆ ನಾನು ನನ್ನ ಶತ್ರುಗಳೊಳಗಿಂದ ರಕ್ಷಿಸಲ್ಪಡುತ್ತೇನೆ.
ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.
ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು.
ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು.
ನನ್ನ ಮೇಲೆ ಕರುಣೆಯಿಡು, ಓ ದೇವರೇ, ನನ್ನನ್ನು ಕರುಣಿಸು; ನನ್ನ ಪ್ರಾಣವು ನಿನ್ನನ್ನು ಆಶ್ರಯಿಸಿಕೊಳ್ಳುತ್ತದೆ. ಆಪತ್ತುಗಳು ದಾಟುವ ವರೆಗೂ ನಿನ್ನ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು.
ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?
ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು.
ಆಗ ನಾನು ಅಯ್ಯೋ, ಕರ್ತನೇ, ನನ್ನ ಪ್ರಾಣವನ್ನು ತಪ್ಪಿಸು ಎಂದು ಕರ್ತನ ಹೆಸರಿನಲ್ಲಿ ಬೇಡಿದೆನು.
ನಾನು ರಕ್ಷಣೆಯ ಪಾತ್ರೆಯನ್ನು ತಕ್ಕೊಂಡು, ಕರ್ತನ ಹೆಸರನ್ನು ಕರೆಯುವೆನು.
ನಾನು ನಿನಗೆ ಸ್ತೋತ್ರದ ಬಲಿಯನ್ನು ಅರ್ಪಿಸುವೆನು; ಕರ್ತನ ಹೆಸರನ್ನು ಕರೆಯುವೆನು.
ಕರ್ತನನ್ನು ನೀವು ಸ್ತುತಿಸಿರಿ, ಕರ್ತನನ್ನು ಆಕಾಶದಿಂದ ನೀವು ಸ್ತುತಿಸಿರಿ; ಉನ್ನತವಾದವುಗಳಲ್ಲಿ ಆತನನ್ನು ಸ್ತುತಿಸಿರಿ.
ಕರ್ತನ ನಾಮದಲ್ಲಿ ಬೇಡಿಕೊಳ್ಳುವ ಯಾರಿಗಾದರೂ ರಕ್ಷಣೆ ಯಾಗುವದು.
ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು.