ಆದದರಿಂದ ದಾವೀದನು ಗಿಬ್ಯೋನ್ಯರಿಗೆ--ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು.
Cross references
ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.
ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.
ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
ನಾನು ಇಸ್ರಾಯೇಲಿನ ಸಮಾ ಧಾನವುಳ್ಳವರಲ್ಲಿಯೂ ನಂಬಿಗಸ್ತರಲ್ಲಿಯೂ ಒಬ್ಬ ಳಾಗಿದ್ದೇನೆ. ನೀನು ಇಸ್ರಾಯೇಲಿನಲ್ಲಿ ತಾಯಿಯಂತಿ ರುವ ಈ ಪಟ್ಟಣವನ್ನು ನಾಶಮಾಡಲು ಹುಡುಕುತ್ತೀ. ನೀನು ಕರ್ತನ ಬಾಧ್ಯತೆಯನ್ನು ನುಂಗುವದೇಕೆ ಅಂದಳು.
ಆಗ ಅವರು ಅವನಿಗೆ--ಸಮುದ್ರವು ನಮಗೆ ಶಾಂತವಾಗುವ ಹಾಗೆ ನಿನಗೆ ಏನು ಮಾಡಬೇಕು? ಯಾಕಂದರೆ ಸಮುದ್ರವು ಹೆಚ್ಚಾಗಿ ಉಬ್ಬುತ್ತಾ ಬರುತ್ತಿದೆ ಅಂದರು.
ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?
ನ್ಯಾಯಪ್ರಮಾಣದಿಂದ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತ ಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ.
ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.