Home Bibles ☰ Books 2 ಸಮುವೇಲ 21:22 · ಕನ್ನಡ ಬೈಬಲ್
2 ಸಮುವೇಲ 21:22 · ಕನ್ನಡ ಬೈಬಲ್

ಈ ನಾಲ್ಕು ಮಂದಿಯು ಗತ್‌ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು.

Cross references

ಯೆಹೋಶುವ 14:12

ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು.

1 ದಿನವೃತ್ತಾಂತ 20:8

ಇವರು ಗತ್‌ನಲ್ಲಿ ಆ ಮಹಾ ಶರೀರದವನಿಗೆ ಹುಟ್ಟಿದರು; ಅವರು ದಾವೀದನ ಕೈಯಿಂದಲೂ ಅವನ ಸೇವಕರ ಕೈಯಿಂದಲೂ ಸತ್ತುಬಿದ್ದರು.

ಕೀರ್ತನೆಗಳು 60:12

ದೇವ ರಿಂದ ಪರಾಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.

ಕೀರ್ತನೆಗಳು 108:13

ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.

ಕೀರ್ತನೆಗಳು 118:15

ರಕ್ಷಣೆಯ ಉತ್ಸಾಹದ ಧ್ವನಿಯು ನೀತಿವಂತರ ಗುಡಾರಗಳಲ್ಲಿ ಅದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.

ಸಭಾಪ್ರಸಂಗಿ 9:11

ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.

ಯೆರೆಮಿಯ 9:23

ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.

ರೋಮಾಪುರದವರಿಗೆ 8:31

ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?

ರೋಮಾಪುರದವರಿಗೆ 8:37

ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.

Interlinear

Choose Theme