ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ಉಂಟಾದಾಗ ಬೇತ್ಲೆಹೇಮಿನವನಾದ ಯಾರೇಯೋರೆ ಗೀಮ್ ಎಂಬವನ ಮಗನಾಗಿರುವ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನ ಸಹೋದರನನ್ನು ಕೊಂದನು. ಈ ಗೊಲ್ಯಾತನ ಈಟಿಯ ಕಟ್ಟಿಗೆಯು ನೆಯ್ಯುವವರ ದೋಣೀ ಮರಕ್ಕೆ ಸಮಾನವಾಗಿತ್ತು.
Cross references
ಆದರೆ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಟನು.
ಅವನ ಈಟಿಯ ಕೋಲು ನೇಯಿಗಾರನ ಕುಂಟೆಯಷ್ಟು ಗಾತ್ರವಿತ್ತು. ಅವನ ಕಬ್ಬಿಣದ ಈಟಿಯ ಅಲಗು ಆರುನೂರು ಶೇಕೆಲು ತೂಕವಾಗಿತ್ತು.
ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು;
ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು,
ತಿರಿಗಿ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾಯಿತು. ಆಗ ಯಾಯಾರನ ಮಗ ನಾದ ಎಲ್ಹನಾನನು ಗಿತ್ತಿಯನಾಗಿರುವ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಇವನ ಈಟಿಯ ಕಟ್ಟಿಗೆಯು ನೇಯುವ ಕುಂಟೆ ಮರಕ್ಕೆ ಸಮಾನವಾಗಿತ್ತು.